ಹಸಿ ತರಕಾರಿಗಳನ್ನು ಫ್ರೀಜ್‌ ಮಾಡುವುದು ಹೇಗೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಸಿ ತರಕಾರಿಗಳು ಹೆಚ್ಚಿನ ಸಮಯ ತಾಜಾ ಇರಲು ಹಾಗೂ ದಿಢೀರ್‌ ಬಳಸಲು ಹೀಗೆ ಮಾಡಿದ್ರೆ ಅಡುಗೆ ಮಾಡಲು ಬಲು ಸುಲಭ ಹಾಗೂ ತರಕಾರಿ ಕೆಡದೆ ಹಾಗೆಯೇ ಇರುತ್ತದೆ.

ಬೇಕಾಗುವ ಪದಾರ್ಥಗಳು:

ಉರುಳಿಕಾಯಿ
ಕ್ಯಾರೆಟ್‌
ಹಸಿ ಬಟಾಣಿ
ಸಿಹಿ ಜೋಳ
ಕೋಸು
ನಿಮಿಗಿಷ್ಟವಾದ ತರಕಾರಿ
ನೀರು, ಪಾತ್ರೆ, ಉಪ್ಪು, ಸಕ್ಕರೆ

ಮಾಡುವ ವಿಧಾನ:

ನಿಮಗೆ ಅಗತ್ಯವಿರುವ ತರಕಾರಿಗಳನ್ನು ಉದ್ದ ಅಥವಾ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ ಒಂದೊಂದೇ ತರಕಾರಿ ಅಥವಾ ಎಲ್ಲವನ್ನೂ ಒಟ್ಟಿಗೆಯಾದರೂ ಸರಿಯೇ ಕುದಿಯುತ್ತಿರುವ ನೀರಿಗೆ ಹಾಕಿ ಜೊತೆಗೆ ಒಂದು ಚಮಚ ಸಕ್ಕರೆ, ಒಂದು ಚಮಚ ಉಪ್ಪು ಹಾಕಿ ಒಂದು ಕುದಿ ಬರುವವರೆಗೂ ಮಾತ್ರ ತಿರುವುತ್ತಾ ಬೇಯಿಸಿ ಒಂದು ಬಟ್ಟಲಿಗೆ ತೆಎದು ಐಸ್‌ ಕ್ಯೂಬ್‌ ನೀರನ್ನು ತರಕಾರಿಗೆ ಹಾಕಿ. ತಣ್ಣೀರಿನಿಂದ ತೆಗೆದು ಒಂದು ಬಿಳಿ ಕಾಟನ್‌ ಬಟ್ಟೆ ಮೇಲೆ ಹಾಕಿ ಒದ್ದೆ ಪೂರ್ತಿ ಹೋಗುವವರೆಗೆ ಒರೆಸಿ. ಒಂದೊಂದೇ ತರಕಾರಿಯನ್ನು ಜಿಪ್‌ ಲಾಕರ್‌ ಕವರ್‌ನಲ್ಲಿ ಹಾಕಿ ಒಂದು ಸ್ಟ್ರಾ ಇಟ್ಟು ಅದರೊಳಗಿರುವ ಗೆಆಳಿ ತೆಗೆದು ಪ್ಯಾಕ್‌ ಮಾಡಿ. ಎಲ್ಲವನ್ನೂ ಇದೇ ರೀತಿ ಮಾಡಿದರೆ ಸುಮಾರು ಆರು ತಿಂಗಳ ಕಾಲ ಕೆಡದೇ ಹಾಗೆ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!