ರಷ್ಯಾದಲ್ಲಿ ವಿಮಾನ ಪತನ: 10 ಮಂದಿ ಸಾವು, ವಾಗ್ನರ್‌ ಗ್ರೂಪ್‌ ಮುಖ್ಯಸ್ಥ ಪ್ರಿಗೋಷಿನ್‌ ಸಾವಿನ ಶಂಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ರಷ್ಯಾದಲ್ಲಿ ವಿಮಾನ ಪತನಗೊಂಡಿದ್ದು, 10 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಈ ಘಟನೆಯಲ್ಲಿ ವಾಗ್ನರ್‌ ಗ್ರೂಪ್‌ ಮುಖಸ್ಥ ಯೆವ್ಗೆನಿ ಪ್ರಿಗೋಷಿನ್‌ ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ವಿಮಾನವು ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ ನಡುವೆ ಕುಝೆಂಕಿನೋ ಗ್ರಾಮದ ಬಳಿ ಪತನಗೊಂಡಿದೆ. ಇಲ್ಲಿನ ಎಮರ್ಜೆನ್ಸಿ ಮಿನಿಸ್ಟರಿ ಪ್ರಾಥಮಿಕ ಮಾಹಿತಿಯ ಪ್ರಕಾರ ವಿಮಾನದಲ್ಲಿದ್ದ 10 ಮಂದಿ ಮೃತಪಟ್ಟಿದ್ದಾರೆ. ಈ ವಿಮಾನದಲ್ಲಿದ್ದ ಪ್ರಯಾಣಿಕರ ಪಟ್ಟಿಯಲ್ಲಿ ವಾಗ್ನರ್‌ ಗ್ರೂಪ್‌ ಮುಖಸ್ಥ ಯೆವ್ಗೆನಿ ಪ್ರಿಗೋಷಿನ್‌ ಹೆಸರು ಇರುವುದಾಗಿ ರಷ್ಯಾ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗಿದೆ.

ಅಪಘಾತದ ಸ್ಥಳದಲ್ಲಿ ಎಲ್ಲಾ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ತಿಳಿಸಿದೆ.

ಪ್ರಿಗೋಷಿನ್‌ ರಷ್ಯಾ ಉಕ್ರೇನ್‌ ಯುದ್ಧದ ಸಮಯದಲ್ಲಿ ರಷ್ಯಾ ವಿರುದ್ಧ ಬಂಡಾಯವೆದ್ದ ಖಾಸಗಿ ಸೇನೆ ವಾಗ್ನರ್‌ ಗ್ರೂಪ್‌ನ ಸ್ಥಾಪಕರಾಗಿದ್ದಾರೆ. ಅವರು ಸೇನೆಯ ಉನ್ನತ ಅಧಿಕಾರಿಗಳ ವಿರುದ್ಧ ದಂಗೆಗೆ ಕಾರಣವಾದ ಎರಡು ತಿಂಗಳ ನಂತರ ಈ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!