ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿದೇಶಕ ನಿತೇಶ್ ತಿವಾರಿ ಮೂರು ಪಾರ್ಟ್‌ಗಳಲ್ಲಿ ರಾಮಾಯಣವನ್ನು ಸಿನಿಮಾ ರೂಪದಲ್ಲಿ ತರೋಕೆ ಮುಂದಾಗಿದ್ದಾರೆ. ಈ ಸಿನಿಮಾಗೆ ಮುಖ್ಯ ಪಾತ್ರಗಳನ್ನು ನಿತೇಶ್ ಆಯ್ಕೆ ಮಾಡಿದ್ದರು. ರಾಮನಾಗಿ ರಣ್‌ಬೀರ್, ಸೀತೆಯಾಗಿ ಆಲಿಯಾ ಹಾಗೂ ರಾವಣನಾಗಿ ಯಶ್‌ಗೆ ಪಾತ್ರ ಆಫರ್ ಮಾಡಲಾಗಿತ್ತು.
ಆಫರ್ ಸಿಕ್ಕ ದಿನವೇ ಯಶ್ ರಿಜೆಕ್ಟ್ ಮಾಡಿದ್ದಾರೆ. ಇನ್ನು ಆಲಿಯಾ ಸಮಯ ತೆಗೆದುಕೊಂಡು ಪಾರ್ಟ್‌ನ್ನು ರಿಜೆಕ್ಟ್ ಮಾಡಿದ್ದಾರೆ. ರಾಮಾಯಣ ಕಥೆಯನ್ನು ಹೇಳಿದ ಆದಿಪುರುಷ್ ಹಾಗೂ ಶಾಕುಂತಲಂ ಫ್ಲಾಪ್ ಆಗಿದೆ. ಜನರಿಗೆ ಪುರಾಣಗಳಿಗೆ ಸಂಬಂಧಿಸಿದ ಸಿನಿಮಾಗಳ ಬಗ್ಗೆ ಆಸಕ್ತಿ ಕಡಿಮೆಯಾದಂತೆ ಕಾಣುತ್ತಿದೆ. ಹಾಗಾಗಿ ಪಾತ್ರವನ್ನು ರಿಜೆಕ್ಟ್ ಮಾಡಿದ್ದೇನೆ ಎಂದು ಆಲಿಯಾ ಹೇಳಿದ್ದಾರೆ.