Wednesday, September 27, 2023

Latest Posts

‘ದಿಲ್ ವಾಲೇ ದುಲ್ಹನಿಯಾ ಲೇಜಾಯೇಂಗೆ’ ಕ್ಲೈಮ್ಯಾಕ್ಸ್ ದೃಶ್ಯದೊಂದಿಗೆ ರೈಲ್ವೆ ಇಲಾಖೆಯಿಂದ ವಿನೂತನ ಪ್ರಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೈಲು ಹತ್ತಿದ ನಂತರ ನೀವು ಯಾವುದಾದರೂ ಸಮಸ್ಯೆಯನ್ನು ಎದುರಿಸಿದ್ದೀರಾ? ಯಾರದ್ದೋ ಸಹಾಯಕ್ಕಾಗಿ ಇನ್ಮುಂದೆ ಕಾಯಬೇಕಿಲ್ಲ, ಎಲ್ಲಾ ದೂರುಗಳಿಗೆ 139 ಸಂಖ್ಯೆ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಲವರಿಗೆ ಇದು ತಿಳಿದಿಲ್ಲದಿರಬಹುದು. ಈ ಬಗ್ಗೆ ಜಾಗೃತಿ ಮೂಡಿಸಲು ರೈಲ್ವೆ ಇಲಾಖೆ ವಿನೂತನವಾಗಿ ಮುಂದಾಗಿದೆ. ರೈಲ್ವೇ ಇಲಾಖೆ ಟ್ವಿಟ್ಟರ್ ನಲ್ಲಿ ಹಾಕಿರುವ ಟ್ವೀಟ್ ನಿಮಗೆ ಒಂದು ಐಡಿಯಾ ನೀಡುತ್ತದೆ.

ರೈಲ್ವೆ ಸಂಬಂಧಿತ ದೂರುಗಳಿಗೆ 139 (ರೈಲ್ವೆ ಮದದ್ ಸಹಾಯವಾಣಿ ಸಂಖ್ಯೆ) ಲಭ್ಯವಿದೆ. ರೈಲು ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ದೂರನ್ನು ಈ ಸಂಖ್ಯೆಗೆ ಡಯಲ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಡಯಲ್ ಮಾಡಿದ ನಂತರ, IVRS ಸೂಚನೆಗಳ ಪ್ರಕಾರ ಸೆಲ್ ಫೋನ್‌ನಲ್ಲಿ ಸಂಖ್ಯೆಗಳನ್ನು ಒತ್ತಬೇಕು. ನಿಮಗೆ ಅಗತ್ಯವಿರುವ ಸಹಾಯಕ್ಕಾಗಿ ಸೂಚಿಸಲಾದ ಸಂಖ್ಯೆಗಳನ್ನು ಒತ್ತುವ ಮೂಲಕ ಸಂದೇಹಗಳನ್ನು ತೆರವುಗೊಳಿಸಬಹುದು. ಇಲ್ಲದಿದ್ದರೆ ಸ್ಟಾರ್ ಬಟನ್ ಒತ್ತುವ ಮೂಲಕ ನೀವು ನೇರವಾಗಿ ಕಾಲ್ ಸೆಂಟರ್ ಸಿಬ್ಬಂದಿಯೊಂದಿಗೆ ಮಾತನಾಡಬಹುದು. ಈ ಸಂಖ್ಯೆಗೆ ದೂರು ನೀಡಲು ಸ್ಮಾರ್ಟ್ ಫೋನ್ ಬೇಕೇಂದೇನಿಲ್ಲ, ಕಿಪ್ಯಾಡ್‌ನಲ್ಲೂ ಕಾರ್ಯನಿರ್ವಹಿಸುತ್ತದೆ.

ಈ ಸಂಖ್ಯೆಯ ಬಗ್ಗೆ ಜಾಗೃತಿ ಮೂಡಿಸಲು ರೈಲ್ವೆ ಇಲಾಖೆ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡಿತ್ತು. ಈ ಬಾರಿ ಈ ಸಂಖ್ಯೆಯನ್ನು ಪ್ರಚಾರ ಮಾಡಲು ವಿನೂತನ ಹೆಜ್ಜೆ ಇಡಲಾಗಿದೆ. ‘ದಿಲ್ ವಾಲೇ ದುಲ್ಹನಿಯಾ ಲೇಜಾಯೇಂಗೆ’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ, ನಟಿ ಸಿಮ್ರಾನ್ ತಂದೆ ಅವರ ಪ್ರೀತಿಯನ್ನು ಸ್ವೀಕರಿಸುತ್ತಾರೆ. ಇದೇ ದೃಶ್ಯದ ಫೋಟೋವನ್ನು ರೈಲ್ವೇ ಇಲಾಖೆ ಸೃಜನಾತ್ಮಕವಾಗಿ ಪೋಸ್ಟ್ ಮಾಡಿದೆ.

@RailMinIndia ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ಆಕೆಯ ತಂದೆ ‘ಸಿಮ್ರಾನ್ ಹೋಗು… ಏನಾದರೂ ಬೇಕಿದ್ದರೆ 139ಗೆ ಕರೆ ಮಾಡು’ ಎಂದು ಹೇಳುವ ಕ್ರಿಯೇಟಿವ್ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‌ಗೆ ಹಲವು ನೆಟ್ಟಿಗರು ಟೀಕಿಸಿದ್ದಾರೆ. 139 ಸಂಖ್ಯೆಗೆ ಕರೆ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂಬ ಕಾಮೆಂಟ್‌ಗಳು ಬಂದಿವೆ. ಇದೆಲ್ಲ ಕೇವಲ ಪ್ರಚಾರಕ್ಕಾಗಿ ಎಂದು ಆಕ್ರೋಶ ಹೊರಹಾಕಿದ್ದಾರೆ. ರೈಲ್ವೆ ಸುತ್ತಮುತ್ತಲಿನ ಶೌಚಾಲಯಗಳು ಸ್ವಚ್ಛವಾಗಿಲ್ಲದಿದ್ದರೆ ದೂರು ನೀಡಲು ವಿಶೇಷ ಸಹಾಯವಾಣಿ ಸಂಖ್ಯೆಯನ್ನು ಸಹ ಸ್ಥಾಪಿಸಬೇಕು ಎಂದು ಇತರರು ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!