April 10, 2026
Friday, April 10, 2026
spot_img

ರಾಜ್ಯಾದ್ಯಂತ ಹೊಸತೊಡಕು ಸಂಭ್ರಮ, ಮಟನ್‌ ಬೆಲೆ ಗಗನಕ್ಕೇರಿದ್ರೂ ಕೊಳ್ಳೋಕೆ ಕ್ಯೂ ನಿಂತ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆಯಷ್ಟೇ ರಾಜ್ಯಾದ್ಯಂತ ಯುಗಾದಿ ಸಂಭ್ರಮ ನಡೆದಿದೆ. ಯುಗಾದಿ ಮರುದಿನ ಹೊಸತೊಡಕು ಸಂಭ್ರಮ ಆರಂಭವಾಗಿದ್ದು, ಜನ ಚಿಕನ್‌ ಮಟನ್‌ ಖರೀದಿಗೆ ಮುಗಿಬಿದ್ದಿದ್ದಾರೆ.

ಬೆಂಗಳೂರು, ದೇವನಹಳ್ಳಿ, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವು ನಗರಗಳಲ್ಲಿ ಮಾಂಸದಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಹೊಸತೊಡಕಿನ ಹಿನ್ನೆಲೆಯಲ್ಲಿ, ಮಟನ್ ಬೆಲೆ ಒಂದು ಕೆಜಿಗೆ 1000 ರೂ.ನಿಂದ 1500 ರೂ. ವರೆಗೆ ಏರಿಕೆ ಕಂಡಿದೆ.

ಬೆಲೆ ಹೆಚ್ಚಿದ್ದರೂ ಸಂಪ್ರದಾಯ ಮುರಿಯೋಕೆ ರೆಡಿ ಇಲ್ಲದ ಜನ ಎಷ್ಟಾದರೂ ಹಣ ಖರ್ಚಾಗಲಿ ಎಂದು ಕ್ಯೂ ನಿಂತಿದ್ದಾರೆ.

ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್, ದೇವನಹಳ್ಳಿಯ ಎಲಿಯೂರು ಮತ್ತು ಮೈಸೂರಿನ ಕನ್ನೇಗೌಡನ ಕೊಪ್ಪಲ್ ಸೇರಿದಂತೆ ಪ್ರಮುಖ ಮಾಂಸದ ಮಳಿಗೆಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಮಟನ್ ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !