ಶಿಂಕರಾಜನ್ ನಾಯಕತ್ವ ಗುಣಗಳಿಂದ ರಾಷ್ಟ್ರೀಯ ಹೋರಾಟ ಮತ್ತಷ್ಟು ಪ್ರಜ್ವಲಿಸಿತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆ. ಶಿಂಕರಾಜನ್ ಕ್ಯಾಸ್ಟ್ರೋ ಅವರು 28 ಆಗಸ್ಟ್ 1903 ರಂದು ಕೇರಳದ ತಿರುವನಂತಪುರಂನ ವಿಝಿಂಜಂನಲ್ಲಿ ಜನಿಸಿದರು. ಶಾಲಾ ಶಿಕ್ಷಣದ ಬಳಿಕ ಅವರು ಉದ್ಯೋಗವನ್ನು ಪಡೆಯಲು ಸಿಲೋನ್ (ಶ್ರೀಲಂಕಾ) ಗೆ ಹೋದರು. ಅಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಜನವರಿ 1935 ರಲ್ಲಿ ಅವರನ್ನು ಬಂಧಿಸಲಾಯಿತು. ಅವರನ್ನು ಸಾಕಷ್ಟು ಕಾಲ ಅಲ್ಲಿನ ಜೈಲೊಂದರಲ್ಲಿ ಇರಿಸಿ ಆ ಬಳಿಕ ನಂತರ ಭಾರತಕ್ಕೆ ಗಡೀಪಾರು ಮಾಡಲಾಯಿತು. 1935 ರಲ್ಲಿಯೇ ಅವರು ಪಟ್ಟಂ ತಾನು ಪಿಳ್ಳೈ ಅವರಿಂದ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವವನ್ನು ಸ್ವೀಕರಿಸಿದರು.
ಆ ಬಳಿಕ ತಿರುವಾಂಕೂರಿನ ಇತರ ನಾಯಕರೊಂದಿಗೆ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದರು. ಸಿ.ಕೇಶವನ್ ಅವರೊಂದಿಗೆ ಅವರು ಆರು ತಿಂಗಳ ಕಾಲ ಜೈಲಿನಲ್ಲಿದ್ದರು. ಅದರ ನಂತರ, ಅವರು ಕಾಂಗ್ರೆಸ್‌ ನ ಸ್ಥಳೀಯ ಸಂಸ್ಥೆಯ ಸ್ವಯಂಸೇವಕ ನಾಯಕರಾದರು. ಆಗಸ್ಟ್ 31, 1938 ರಂದು ನೆಯ್ಯಟ್ಟಿಂಕರ ಪೋಲೀಸರ ಗುಂಡಿನ ದಾಳಿಯಲ್ಲಿ ಅವರು ಗಾಯಗೊಂಡರು. ಅವರು ಸಾವಿನಿಂದ ಬಚಾವಾದರದರೂ, ಅವರನ್ನು ತಿರುವನಂತಪುರಂ ರೈಲು ನಿಲ್ದಾಣದಲ್ಲಿ ಬಂಧಿಸಲಾಯಿತು. ಆ ಬಳಿಕ ಪುತ್ಥನಚಂತ ಪೊಲೀಸ್ ಠಾಣೆಯಲ್ಲಿ ಒಂದು ವಾರ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಬಿಡುಗಡೆಯ ನಂತರ, ಅವರು ವಟ್ಟಿಯೂರ್ಕಾವ್ ಕಾಂಗ್ರೆಸ್ ಸಮ್ಮೇಳನದ ನಾಯಕತ್ವ ವಹಿಸಿದರು. ಬ್ರಿಟಿಷರು ಈ ಕಾಂಗ್ರೆಸ್ ಸಮ್ಮೇಳನವನ್ನು ನಿಷೇಧಿಸಿದರು. ಮತ್ತು ಮತ್ತೆ ಶಿಂಕರಾಜನ್ ಅವರನ್ನು ಬಂಧಿಸಲಾಯಿತು. ಅವರು 18 ತಿಂಗಳ ಕಾಲ ಕುಜಿತ್ತೂರ ಜೈಲಿನಲ್ಲಿ ಪೊಲೀಸ್ ವಶದಲ್ಲಿದ್ದರು. ಅವರು ಮಾರ್ಚ್ 10, 2006 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!