ಅಬ್ಬಬ್ಬಾ.. 1.30 ಲಕ್ಷ ನೀಡಿ ಒಂದು ಬಿಂದಿಗೆ ಪವಿತ್ರ ಜಲ ಖರೀದಿಸಿದ ದಂಪತಿ; ಈ ನೀರಿನಲ್ಲಿ ಅಂತಹ ವೈಶಿಷ್ಟ್ಯವೇನಿದೆ ಗೊತ್ತಾ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಕ್ಕಳಿಲ್ಲದ ದಂಪತಿಗಳ ಪಾಡು ಹೇಳತೀರದು. ಸಂತಾನಕ್ಕಾಗಿ ಎಷ್ಟೇ ಪ್ರಯತ್ನ ಪಟ್ಟರೂ ಫಲ ಸಿಗದೇ ಪರ್ಯಾಯ ಮಾರ್ಗಗಳ ಮೊರೆ ಹೋಗುತ್ತಾರೆ. ಆದರೆ ಒಂದು ಪ್ರದೇಶದಲ್ಲಿ ಸಿಗುವ ಒಂದು ಬಿಂದಿಗೆಯ ನೀರಿನಿಂದ ಸ್ನಾನ ಮಾಡಿದರೆ ಮಕ್ಕಳ ಭಾಗ್ಯ ಸಿಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ದಂಪತಿಗಳಿಬ್ಬರು ಒಂದು ಬಿಂದಿಗೆ ನೀರಿಗೆ 1.30 ಲಕ್ಷರೂಪಾಯಿ ನೀಡಿ ನೀರು ಖರೀದಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿರುವ ಮುಕ್ತೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಈ ದೇವಾಲಯದಲ್ಲಿ ಮರೀಚಿ ಹೊಂಡವನ್ನು ಹೊಂದಿದೆ. ಈ ಹೊಂಡ ಅಶೋಕ ಮರಗಳಿಂದ ಆವೃತವಾಗಿದೆ. ಮರಗಳ ಬೇರುಗಳ ಪ್ರಭಾವದಿಂದಾಗಿ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ. ಪ್ರತಿ ವರ್ಷ ಅಶೋಕ ಅಷ್ಟಮಿಯ ಹಿಂದಿನ ರಾತ್ರಿ ಮರೀಚಿ ಹೊಂಡದ ನೀರನ್ನು ಹರಾಜು ಹಾಕಲಾಗುತ್ತದೆ. ಈ ಬಾರಿ ಕೂಡ ನೀರಿನ ಹರಾಜು ಪ್ರಕ್ರಿಯೆ ನಡೆದಿದೆ. ಅದರಲ್ಲಿ ಭುವನೇಶ್ವರದ ಬಾರಾಮುಂಡಾ ಪ್ರದೇಶದಲ್ಲಿ ವಾಸಿಸುವ ದಂಪತಿ ರೂ. 1.30 ಲಕ್ಷ ರೂ.ಗೆ ಒಂದು ಬಿಂದಿಗೆ ನೀರನ್ನು ಖರೀದಿಸಿದ್ದಾರೆ. ಎರಡನೇಯದು 47 ಸಾವಿರಕ್ಕೆ, ಮೂರನೇ ಬಿಂದಿಗೆ ರೂ. 13 ಸಾವಿರಕ್ಕೆ ಹರಾಜು ಹಾಕಲಾಗಿದೆ. ಉಳಿದ ನೀರನ್ನು ಬಡವರಿಗೆ ಉಚಿತವಾಗಿ ವಿತರಿಸಲಾಯಿತು. ಈ ನೀರಿನಿಂದ ಸ್ನಾನ ಮಾಡುವುದರಿಂದ ಸಂತಾನಹೀನತೆ ದೂರವಾಗುತ್ತದೆ ಹಾಗೂ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂಬುದು ಭಕ್ತರ ನಂಬಿಕೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!