ರಾಗಿ ಅಂಬಲಿ ಹೀಗೆ ಮಾಡಿದರೆ ತುಂಬಾ ರುಚಿಯಾಗಿರುತ್ತೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬೇಸಿಗೆಯಲ್ಲಿ ರಾಗಿಗಂಜಿ ಕುಡಿಯುವುದು ತುಂಬಾ ಉಪಯುಕ್ತ. ರಾಗಿಗಂಜಿ ಕುಡಿಯುವುದರಿಂದ ದೇಹದಲ್ಲಿನ ಉಷ್ಣಾಂಶ ಕಡಿಮೆಯಾಗುತ್ತದೆ. ಇದರಲ್ಲಿ ಕಬ್ಬಿಣ, ಫೈಬರ್, ಖನಿಜಗಳು ಮತ್ತು ಅಯೋಡಿನ್ ಸಮೃದ್ಧವಾಗಿದೆ. ಬೆಳೆಯುವ ಮಕ್ಕಳಿಗೆ ರಾಗಿ ಅಂಬಲಿ ನೀಡುವುದರಿಂದ ಮಗು ಆರೋಗ್ಯವಾಗಿ ಹಾಗೂ ಸದೃಢವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಅಧಿಕ ತೂಕ ಹೊಂದಿರುವವರು ರಾಗಿ ಅಂಬಲಿ ಕುಡಿದರೆ ಉತ್ತಮ ಪ್ರತಿಫಲ ದೊರೆಯುತ್ತದೆ. ಗಂಜಿ ಕುಡಿದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಪ್ರತಿನಿತ್ಯ ಗಂಜಿ ಕುಡಿಯುವುದರಿಂದ ಆಯಾಸವೂ ಆಗುವುದಿಲ್ಲ. ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಮಧುಮೇಹ, ಸ್ಥೂಲಕಾಯತೆ ಮತ್ತು ಬಿಪಿಯಿಂದ ಬಳಲುತ್ತಿರುವವರಿಗೆ ರಾಮಬಾಣ. ಇದರಲ್ಲಿರುವ ಕ್ಯಾಲ್ಸಿಯಂ ವಯಸ್ಸಾದವರಿಗೂ ತುಂಬಾ ಸಹಕಾರಿ.

ಅಂಬಲಿ ತಯಾರಿಸುವ ವಿಧಾನ:
ಅಂಬಲಿ ತಯಾರು ಮಾಡಲು, ಮೊದಲು ಮೂರು ಚಮಚ ಅಕ್ಕಿ ಹಿಟ್ಟು, ಮೂರು ಚಮಚ ಸಜ್ಜೆ ಹಿಟ್ಟು, ಮೂರು ಚಮಚ ಬಿಳಿ ಜೋಳದ ಹಿಟ್ಟು, ಒಂದು ಕಪ್ ರಾಗಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಮತ್ತು ಮಜ್ಜಿಗೆ.
ಒಂದು ಪಾತ್ರೆಯಲ್ಲಿ ನೀರು ಸುರಿದು ಅದಕ್ಕೆ ರಾಗಿ ಹಿಟ್ಟು ಹಾಕಿ ಉಂಡೆ ಇಲ್ಲದಂತೆ ಚೆನ್ನಾಗಿ ಕಲಕಿರಿ. ಅಕ್ಕಿ ಹಿಟ್ಟು, ಸಜ್ಜಿಗೆ ಹಿಟ್ಟು, ಬಿಳಿ ಜೋಳದ ಹಿ,ಟ್ಟು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಒಲೆಯ ಮೇಲೆ ದೊಡ್ಡ ಪಾತ್ರೆ ಇಟ್ಟು ಮೂರು ಲೋಟ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿ ಬಂದ ಮೇಲೆ ಬೆರೆಸಿದ ರಾಗಿ ಹಿಟ್ಟಿನ ಮಿಶ್ರಣವನ್ನು ಸೇರಿಸಿ. ಕಡಿಮೆ ಶಾಖದ ಮೇಲೆ ಕುದಿಯಲು ಬಿಡಬೇಕು. ಗಂಟಿಲ್ಲದಂತೆ ಆಗಾಗ ಸೌಟಿನಿಂದ ಅಥವಾ ಚಮಚದಿಂದ ತಿರುವುದರೆ ಉತ್ತಮ. ಗಂಜಿ ಸ್ವಲ್ವ ಗಟ್ಟಿಯಾದ ಮೇಲೆ ಒಲೆ ಆಫ್ ಮಾಡಿ. ಸ್ವಲ್ಪ ತಣ್ಣಗಾದ ಬಳಿಕ ಅದಕ್ಕೆ ಮಜ್ಜಿಗೆ ಸೇರಿಸಿ ಇಷ್ಟೇ ರಾಗಿ ಅಂಬಲಿ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!