ಹೊಸದಿಗಂತ ವರದಿ, ಮೈಸೂರು:
ನಿಮ್ಮ ಮಗನಿಗೆ ವಿದೇಶದಿಂದ ಔಷಧಿ ತರಿಸಿಕೊಡುತ್ತೇವೆ ಎಂದು ಮಹಿಳೆಯೊಬ್ಬರನ್ನು ನಂಬಿಸಿ, ಆಕೆಯಿಂದ ೧.೫ ಲಕ್ಷರೂ ಪಡೆದು ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಗಾಯಿತ್ರಿಪುರಂ ನ ಹುಮೇರಾ ಜೈನಾಬ್ ವಂಚನೆಗೆ ಒಳಗಾದವರು.
ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಹುಮೇರಾ ಜೈನಾಬ್ ರವರ ಮಗನ ಆರೋಗ್ಯದ ಪರಿಸ್ಥಿತಿ ಅರಿತುಕೊಂಡು, ಜರ್ಮನಿಯಲ್ಲಿ ನನ್ನ ಸಹೋದರ ಡಾಕ್ಟರ್ ಅಲ್ಲಿಂದ ಮೆಡಿಸನ್ ಹಾಗೂ ಚಾಕಲೇಟ್ ಗಳನ್ನ ತರಿಸಿಕೊಡುವುದಾಗಿ ನಂಬಿಸಿದ್ದಾನೆ.
ಈತನ ಮಾತನ್ನ ನಂಬಿದ ಹುಮೇರಾ ಜೈನಾಬ್ ಆತ ಹೇಳಿದಂತೆ ಡೆಲಿವರಿ ಚಾರ್ಜ್ ಹಾಗೂ ಪೆನಾಲ್ಟಿ ಎಂದು ಕಾರಣ ನೀಡಿ ಹಂತ ಹಂತವಾಗಿ ತನ್ನ ಖಾತೆಗೆ ೧.೫ ಲಕ್ಷ ಹಾಕಿಸಿಕೊಂಡು ವಂಚನೆ ಮಾಡಿದ್ದಾನೆ. ಮೋಸ ಹೋಗಿರುವುದು ಅರಿವಾಗುತ್ತಿದ್ದಂತೆ ಹುಮೇರಾ ಜೈನಾಬ್ ನೀಡಿದ ದೂರಿನ ಮೇಲೆ ಸೆನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.