Saturday, December 9, 2023

Latest Posts

ಸೆಪ್ಟೆಂಬರ್ ತಿಂಗಳಲ್ಲಿ 1.63 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು (GST) ಕಳೆದ ವರ್ಷಕ್ಕೆ ಹೋಲಿಸಿದರೆ, 2023ರ ಸೆಪ್ಟೆಂಬರ್ ತಿಂಗಳಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ ಸೆಪ್ಟೆಂಬರ್‌ನಲ್ಲಿ 1,62,712 ಕೋಟಿ ರೂ.ಸಂಗ್ರಹವಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಕಲೆಕ್ಷನ್‌(GST Collection) ನಾಲ್ಕನೇ ಬಾರಿಗೆ 1.60 ಲಕ್ಷ ಕೋಟಿ ರೂ. ದಾಟಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.

ಸೆಪ್ಟೆಂಬರ್‌ಗೆ ಮುಕ್ತಾಯವಾದ 2023-24 ಸಾಲಿನ ಮೊದಲಾರ್ಧದಲ್ಲಿ ಒಟ್ಟಿ ಜಿಎಸ್‌ಟಿ ಸಂಗ್ರಹವು 8,92,508 ಕೋಟಿ ರೂಪಾಯಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸದರೆ ಜಿಎಸ್‌ಟಿ ಸಂಗ್ರಹದಲ್ಲಿ ಒಟ್ಟು ಶೇ.11ರಷ್ಟು ಏರಿಕೆಯಾಗಿದೆ. ವರ್ಷದ ಹಿಂದೆ 8,93,334 ಕೋಟಿ ರೂ. ಸಂಗ್ರಹವಾಗಿತ್ತು.

ತಿಂಗಳ ಅವಧಿಯಲ್ಲಿ, ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 14 ಪ್ರತಿಶತ ಹೆಚ್ಚಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ನಾಲ್ಕನೇ ಬಾರಿಗೆ 1.60 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

2023-24ರ ಸಾಲಿನಲ್ಲಿ ಪ್ರತಿ ತಿಂಗಳು ಸರಾಸರಿ 1.65 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. 2022-23ರ ಸಾಲಿನ ಮೊದಲಾರ್ಧ ಸಂಗ್ರಹವಾದ ಮೊತ್ತಕ್ಕೆ ಹೋಲಿಸಿದರೆ, ಇದು ಶೇ.11ರಷ್ಟು ಹೆಚ್ಚು. ಆ ಅವಧಿಯಲ್ಲಿ 1.49 ಲಕ್ಷ ರೂ. ಸರಾಸರಿ ಸಂಗ್ರಹವಾಗಿತ್ತು.

2023ರ ಸೆಪ್ಟೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,62,712 ಕೋಟಿ ರೂ. ಆಗಿದೆ. ಈ ಪೈಕಿ ಸಿಜಿಎಸ್‌ಟಿ 29,818 ಕೋಟಿ ರೂ., ಎಸ್‌ಜಿಎಸ್‌ಟಿ 37,657 ಕೋಟಿ ರೂ., ಐಜಿಎಸ್‌ಟಿ 83,623 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 41,145 ಕೋಟಿ ರೂ. ಸೇರಿದಂತೆ) ಮತ್ತು ಸೆಸ್ 11,613 ಕೋಟಿ ರೂ. (ಸಂಗ್ರಹಿಸಿದ ಸರಕುಗಳ ರೂ 881 ಕೋಟಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!