Tuesday, July 5, 2022

Latest Posts

ಕಲಬುರಗಿ: 1 ಕೋಟಿ 27 ಲಕ್ಷ ಮೌಲ್ಯದ ಕಳವು ಮಾಲು ವಾರಸುದಾರರಿಗೆ ಹಸ್ತಾಂತರ

ಹೊಸದಿಗಂತ ವರದಿ, ಕಲಬುರಗಿ
ಕಳೆದ ಆರು ತಿಂಗಳ ಅವಧಿಯಲ್ಲಿ ಭರ್ಜರಿ ಕಾರ್ಯಚರಣೆ ನಡೆಸಿರುವ ಕಲಬುರಗಿ ಪೋಲಿಸರು ಬರೋಬ್ಬರಿ 1 ಕೋಟಿ 27 ಲಕ್ಷ ಮೌಲ್ಯದ ಕಳವು ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
2296 ಗ್ರಾಂ ಚಿನ್ನ ,10,150 ಗ್ರಾಂ  ಬೆಳ್ಳಿ  ವಸ್ತುಗಳು ಸೇರಿದಂತೆ ಒಟ್ಟು 1,27,73,520 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದು, ನವೆಂಬರ್ 2021ರಿಂದ ಏಪ್ರಿಲ್ 2022 ರವರೆಗೆ ದಾಖಲಾದ 243 ಪ್ರಕರಣಗಳಲ್ಲಿ 62 ಪ್ರಕರಣಗಳಲ್ಲಿ ಕಳವಾಗಿದ್ದ ವಸ್ತುಗಳನ್ನು ನೈಜ ವಾರಸುದಾರರಿಗೆ ಹಿಂತಿರುಗಿಸಲಾಗಿದೆ.
ಶನಿವಾರ ನಗರದ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳುವಾಗಿದ್ದ ವಸ್ತುಗಳ ವಾರಸದಾರರಿಗೆ ಪೊಲೀಸರು ವಸ್ತುಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಡಿಸಿಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಇತರೆ ಪೋಲಿಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss