ಮೇ 28ರಿಂದ ಒಂದು ವರ್ಷಗಳ ಕಾಲ ಟಾಲಿವುಡ್‌ನಲ್ಲಿ ‘ಶಕಪುರುಷನ ಶತಮಾನೋತ್ಸವ ಸಂಭ್ರಮ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲುಗು ಸಿನಿಮಾ ದಿಗ್ಗಜ ನಟ, ವಿಶ್ವವಿಖ್ಯಾತ ನಟ ಸಾರ್ವಭೌಮ ಎನ್‌ಟಿಆರ್ ಅವರ ಪುತ್ರ, ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ ತಮ್ಮ ತಂದೆಯ ಶತದಿನೋತ್ಸವ ಆಚರಿಸಲು ನಿರ್ಧರಿಸಿದ್ದಾರೆ. ಶತಮಾನೋತ್ಸವ ಆಚರಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇದೇ 28ರಿಂದ ‘ಶಕಪುರುಷನ ಶತಮಾನೋತ್ಸವ ಸಂಭ್ರಮ’ ಎಂಬ ಹೆಸರಿನಲ್ಲಿ ತಂದೆ ಎನ್‌ಟಿಆರ್‌ ಅವರ 100ನೇ ಜನ್ಮದಿನವನ್ನು ಆಚರಿಸುವುದಾಗಿ ಬಾಲಯ್ಯ ತಿಳಿಸಿದರು.

ನಂದಮೂರಿ ತಾರಕ ರಾಮರಾವ್ ಚಿತ್ರರಂಗಕ್ಕೆ ಬಂದ ನಂತರ ತೆಲುಗು ಚಿತ್ರರಂಗ ಕೂಡ ಭಾರತೀಯ ಸಿನಿ ರಂಗದ ಒಂದು ಭಾಗವಾಗಿ ಗುರುತಿಸಿದೆ ಎಂದು ಬಾಲಕೃಷ್ಣ ಹೇಳಿದ್ದಾರೆ. ಈ ತಿಂಗಳ 28 ರಿಂದ 2023 ರ ಮೇ 28 ರವರೆಗೆ 365 ದಿನಗಳ ಕಾಲ ಶತಮಾನೋತ್ಸವ ಸಂಭ್ರಮಾಚರಣೆ ನಡೆಯಲಿದೆ. ನಂದಮೂರಿ ಕುಟುಂಬದ ಸದಸ್ಯರು ಈ ಆಚರಣೆಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಇದರ ಅಂಗವಾಗಿ ಇದೇ 28ರಂದು ಬೆಳಗ್ಗೆ ಹುಟ್ಟೂರು ನಿಂಬಕೂರಿನಲ್ಲಿ ನಡೆಯುವ ಜಯಂತಿ ಆಚರಣೆಯಲ್ಲಿ ತಾವೇ ಖುದ್ದಾಗಿ ಪಾಲ್ಗೊಳ್ಳುವುದಾಗಿ ಬಾಲಕೃಷ್ಣ ಬಹಿರಂಗಪಡಿಸಿದರು. ನೂರು ವರ್ಷಗಳ ಹಿಂದೆ ತಮ್ಮ ತಂದೆಯನ್ನು ಬೆಳೆಸಿದ ಸ್ಥಳವಾಗಿದ್ದರಿಂದ ಇದು ನನ್ನ ಜವಾಬ್ದಾರಿ ಎಂದು ಬಾಲಯ್ಯ ಹೇಳಿದರು. ಅಲ್ಲಿಂದ ತೆನಾಲಿ ತಲುಪಿ ಅಲ್ಲಿ ಆಯೋಜಿಸಿರುವ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. 365 ದಿನಗಳವರೆಗೆ ವಾರಕ್ಕೆ 5 ಚಲನಚಿತ್ರಗಳು, ಎರಡು ಸಮ್ಮೇಳನಗಳೊಂದಿಗೆ ರಾಮಕೃಷ್ಣ ರಂಗಮಂದಿರದಲ್ಲಿ ಶತಮಾನೋತ್ಸವ ಸಮಾರಂಭ ನಡೆಯಲಿದೆ. ತಿಂಗಳಿಗೆ ಎರಡು ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯುವುದಾಗಿ ನಟ ಬಾಲಕೃಷ್ಣ ತಿಳಿಸಿದರು.

Ntr 100 Birth Anniversary

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!