ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ 2021ರಲ್ಲಿ ಬರೋಬ್ಬರಿ 1 ಕೋಟಿ ಜನ ಭೇಟಿ ನೀಡಿದ್ದಾರೆ.
ಟಿಟಿಡಿ ಮಂಡಳಿ ನಡೆಸಿದ ಹುಂಡಿ ಎಣಿಕೆಯಲ್ಲಿ 2021ರ ಜನವರಿ 1 ರಿಂದ ಡಿ.31ರವರೆಗೆ 833 ಕೋಟಿ ರೂ. ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
2021ರ ಇಡೀ ವರ್ಷದಲ್ಲಿ 1.04 ಕೋಟಿ ಜನ ತಿಮ್ಮಪ್ಪನ ದರ್ಶನ ಪಡೆದಿದ್ದು, ಟಿಟಿಡಿ ಮಂಡಳಿ 5.96 ಕೋಟಿ ಲಡ್ಡುಗಳನ್ನು ಮಾರಾಟ ಮಾಡಿದೆ. ಇನ್ನು 1.37 ಕೋಟಿ ಜನರಿಗೆ ಅನ್ನ ಸಂತರ್ಪಣೆ ಮಾಡಲಾಗಿದ್ದು, 48.75 ಲಕ್ಷ ಜನ ಮುಡಿ ಕೊಟ್ಟಿದ್ದಾರೆ ಎಂದು ಟಿಟಿಡಿ ತಿಳಿಸಿದೆ.
ಮೇ.2020ರಲ್ಲಿ ಟಿಟಿಡಿ ಭಕ್ತರು ನೀಡಿದ ಯಾವುದೇ ಸ್ಥಿರಾಸ್ತಿಯನ್ನು ಹರಾಜು ಹಾಕುವುದಿಲ್ಲ ಎಂದು ನಿರ್ಧರಿಸಿತ್ತು.