ಇಂದಿನಿಂದ 15-18 ವರ್ಷದ ಮಕ್ಕಳ ಕೋವಿಡ್ ಲಸಿಕೀಕರಣಕ್ಕೆ ನೋಂದಣಿ ಪ್ರಕ್ರಿಯೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಜ.3ರಿಂದ 15-18 ವರ್ಷದ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನಿಂದ ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆ ಶುರುವಾಗಲಿದೆ.
ಕೋವಿನ್‌ ವೆಬ್‌ ಸೈಟ್‌ ಅಥವಾ ಕೋವಿನ್‌ ಆಪ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ವಯಸ್ಕರರಿಗೆ ಆಧಾರ್‌ ಕಾರ್ಡ್‌ ಹೊರತುಪಡಿಸಿ ಶಾಲಾ, ಕಾಲೇಜುಗಳ ಐಡಿ ಕಾರ್ಡ್‌ ಗಳನ್ನು ಕೂಡ ನೋಂದಣಿಗೆ ಬಳಸಿಕೊಳ್ಳಬಹುದು.
ಈಗಾಗಲೇ ಕೇಂದ್ರ ಆರೋಗ್ಯ ಕಾರ್ಯದರ್ಶಿ ವಿಡಿಕೋ ಕಾನ್ಫರೆನ್ಸ್‌ ಮೂಲಕ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಇನ್ನುಳಿದಂತೆ ಜ.10ರಿಂದ 60ವರ್ಷ ಮೇಲ್ಪಟ್ಟು ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೋವಿಡ್‌ ಹೋರಾಟಗಾರರಿಗೆ ಬೂಸ್ಟರ್‌ ಡೋಸ್‌ ನೀಡಲಾಗುತ್ತದೆ.

ನೋಂದಣಿ ಹೇಗೆ?

  • ಮೊದಲು ಕೋವಿನ್‌ ವೆನ್‌ ಸೈಟ್‌ ಗೆ ಲಾಗಿನ್‌ ಆಗಿ, ಅಲ್ಲಿ ರಿಜಿಟರ್‌ ಅಥವಾ ಸೈನ್‌ ಇನ್‌ ಆಪ್ಷನ್ ಮೇಲೆ ಕ್ಲಿಕ್‌ ಮಾಡಿ.
  • ನಿಮ್ಮ ಮೊಬೈಲ್‌ ಸಂಖ್ಯೆ ಮೂಲಕ ಒಟಿಪಿ ಪಡೆದು ವೇರಿಫೈ ಮಾಡಿ.
  • ಬಳಿಕ ಮಗುವಿನ ಹೆಸರು, ವಯಸ್ಸು, ಐಡಿ ಪ್ರೂಪ್‌ ಸೇರಿದಂತೆ ಎಲ್ಲಾ ಮಾಹಿತಿ ತುಂಬಿರಿ.
  • ನಂತರ ನಿಮ್ಮ ಹತ್ತಿರದ ಲಸಿಕಾ ಕೇಂದ್ರ, ದಿನಾಂಕ, ಸಮಯವನ್ನು ಆಯ್ಕೆ ಮಾಡಿ ಕನ್ಫರ್ಮ್‌ ಕೊಟ್ಟು ಬುಕ್‌ ಮಾಡಿ.

ದೇಶದಲ್ಲಿ ಕೋವಿಡ್‌ ನಡುವೆ ಹೊಸ ರೂಪಾಂತರಿ ಒಮಿಕ್ರಾನ್‌ ನ ಭೀತಿಯೂ ಹೆಚ್ಚಾಗಿದ್ದು, ಈಗಾಗಲೇ 1,270 ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!