Friday, March 24, 2023

Latest Posts

ಉಕ್ರೇನ್‌ ನಲ್ಲಿನ ಭಾರತೀಯ ರಕ್ಷಣಾ ಕಾರ್ಯ ಚುರುಕು: ನಾಳೆ 2,200 ಮಂದಿ ತಾಯ್ನಾಡಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಭಾರತ ಸರ್ಕಾರ ನಿರಂತರ ಶ್ರಮಿಸುತ್ತಿದ್ದು, ನಾಳೆ 11 ವಿಮಾನಗಳ ಮೂಲಕ 2 ಸಾವಿರಕ್ಕೂ ಹೆಚ್ಚು ಜನ ತಾಯ್ನಾಡಿಗೆ ವಾಪಾಸ್‌ ಬರಲಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕಳೆದ 24 ಗಂಟೆಗಲ್ಲಿ 15 ವಿಮಾನಗಳ ಮೂಲಕ 2900 ಭಾರತೀಯರು ಸುರಕ್ಷಿತವಾಗಿ ಬಂದಿದ್ದಾರೆ. ಈ ವರೆಗೆ 13,300 ಭಾರತೀಯರನ್ನು ಉಕ್ರೇನ್‌ ನಿಂದ ಭಾರತಕ್ಕೆ ಕರೆತರಲಾಗಿದೆ. ಮುಂದಿನ 24 ಗಂಟೆಗಳಲ್ಲಿ 13 ವಿಮಾನಗಳ ಮೂಲಕ 2200 ಭಾರತೀಯರು ವಾಪಾಸ್‌ ಆಗಲಿದ್ದಾರೆ. ಈಗಾಗಲೇ ಉಕ್ರೇನ್‌ ಹತ್ತಿರದ ರಾಷ್ಟ್ರಗಳಿಗೆ ಕೇಂದ್ರದ ತಂಡಗಳನ್ನು ಕಳುಹಿಸಲಾಗಿದೆ ಎಂದರು.
ಇಂದು ಕೂಡ ಹಂಗೇರಿ, ರೊಮೇನಿಯಾ ಹಾಗೂ ಸ್ಲೋವಾಕಿಯಾ ಹಾಗೂ ಪೋಲೆಂಡ್​​ನಿಂದ ವಿದ್ಯಾರ್ಥಿಗಳನ್ನ ಹೊತ್ತು ವಿಮಾನಗಳು ಬಂದಿಳಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!