ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಭಾರತದ ಮಹಿಳೆಯರು ಬದ್ಧ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾವನ್ನು 107 ರನ್ ಗಳಿಂದ ಮಣಿಸಿ ಗೆದ್ದು ಬೀಗಿದ್ದಾರೆ.
ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಆಯ್ದುಕೊಂಡ ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 52 ರನ್, ದೀಪ್ತಿ 40 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ೨೧ ಓವರ್ ಗಳಲ್ಲಿ ಎರೆಡು ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದ್ದ ಭಾರತ ಬಳಿಕ ದಿಢೀರ್ ಕುಸಿತಕ್ಕೆ ಒಳಗಾಯಿತು. ಅನುಭವಿಗಳಾದ ನಾಯಕಿ ಮಿಥಾಲಿ ರಾಜ್ 9, ಹರ್ಮನ್ಪ್ರೀತ್ ಕೌರ್ 5 ಹಾಗೂ ಯುವ ಆಟಗಾರ್ತಿ ರಿಚಾ ಘೋಷ್ ಕೇವಲ 1 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ತಂಡವನ್ನು ಆಧರಿಸಿದ ಸ್ನೇಹ್ ರಾಣ(53) ಹಾಗೂ ಪೂಜಾ ವಸ್ತ್ರಕರ್(67) ರನ್ ಸಿಡಿಸಿ ತಂಡವನ್ನು ಆಧರಿಸಿದರು.
ಅಂತಿಮವಾಗಿ 50 ಓವರ್ಗಳಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಾಕ್ ವನಿತೆಯರು ಭಾರತದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿ 43 ಓವರ್ ಗಳಲ್ಲಿ ಕೇವಲ 137 ರನ್ ಗಳಿಗೆ ಆಲೌಟ್ ಆಗಿದ್ದಾರೆ. ಮಾರಕ ದಾಳಿ ನಡೆಸಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ 4 ವಿಕೆಟ್, ಜೂಲನ್ ಗೋಸ್ವಾಮಿ ಹಾಗೂ ಸ್ನೇಹ್ ರಾಣ 2 ವಿಕೆಟ್ ಕಬಳಿಸಿ ಪಾಕ್ ಬ್ಯಾಂಟಿಂಗ್ ಬೆನ್ನೆಲುಬು ಮುರಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ