ಮ್ಯಾನ್ಮಾರ್ ನಿಂದ ಬಾಂಗ್ಲಾ ಗಡಿಯಲ್ಲಿ ಶೆಲ್‌ ದಾಳಿ: ಓರ್ವ ಸಾವು, 6 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾ ಗಡಿಯುದ್ದಕ್ಕೂ ಮ್ಯಾನ್ಮಾರ್ ನಡೆಸಿದ ಗುಂಡಿನ ದಾಳಿ ಮತ್ತು ಮೋರ್ಟಾರ್ ಶೆಲ್ಲಿಂಗ್‌ ನಲ್ಲಿ ಒಬ್ಬರು ಸಾವನ್ನಪ್ಪಿ, ರೋಹಿಂಗ್ಯಾ ಮಗು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಂದರ್‌ಬನ್‌ನ ಗುಮ್‌ಧಮ್‌ ಪ್ರದೇಶದಲ್ಲಿ ಮ್ಯಾನ್ಮರ್‌ ಉಡಾಯಿಸಿದ ಶೆಲ್‌ಗಳು ಜಮೀನೊಂದರಲ್ಲಿ ಬಿದ್ದಿವೆ. ಕೋನಾರ್‌ಪಾರಾದಲ್ಲಿರುವ ಶಾ ಆಲಂ ಎಂಬುವವರ ಮನೆಯ ಪಕ್ಕದ ಪೊದೆಯಲ್ಲಿ ಗುಂಡುಗಳು ಬಿದ್ದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಿಂದಿನ ದಿನ, ತುಂಬ್ರುವಿನ ಹೆಡ್‌ಮನ್‌ಪಾರಾ ಗಡಿ ಪ್ರದೇಶದಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಬಾಂಗ್ಲಾದೇಶದ ಯುವಕನೊಬ್ಬ ಗಾಯಗೊಂಡಿದ್ದ. ಶುಕ್ರವಾರ ಮಧ್ಯಾಹ್ನ ಮ್ಯಾನ್ಮಾರ್ ಗಡಿಯ ಬಳಿ ಈ ಘಟನೆ ನಡೆದಿದೆ. ಯುವಕ ಅಥ್ವೈಂಗ್ ದನಗಳನ್ನು ಮನೆಗೆ ಕರೆತರಲು ಗಡಿ ಪ್ರದೇಶದ ಬಳಿ ಹೋಗಿದ್ದಾಗ ನೆಲಬಾಂಬ್‌ ಮೇಲೆ ಕಾಲಿಟ್ಟಾಗ ತನ್ನ ಕಾಲುಗಳನ್ನು ಕಳೆದುಕೊಂಡಿದ್ದಾನೆ.  ಘಟನೆಯ ನಂತರ ಬಾಂಗ್ಲಾದೇಶ ಗಡಿ ರಕ್ಷಣಾ ಪಡೆ ಗಸ್ತು ಮತ್ತು ಕಣ್ಗಾವಲು ಹೆಚ್ಚಿಸಿದೆ.
ಬಾಂಗ್ಲಾದೇಶದ ಗಡಿಯಲ್ಲಿ ಮ್ಯಾನ್ಮಾರ್ ಪಡೆಗಳು ನೂರಾರು ಚೆಕ್‌ ಪೋಸ್ಟ್ ಗಳನ್ನು ಹಾಕಿವೆ ಎಂದು ಸ್ಥಳೀಯರು ಹೇಳಿದ್ದಾರೆ.  ಸೆಪ್ಟೆಂಬರ್ 3 ರಂದು, ಮ್ಯಾನ್ಮಾರ್ ಹೆಲಿಕಾಪ್ಟರ್‌ಗಳು ನೈಖೋಂಗ್‌ಚಾರಿ ಪಾಯಿಂಟ್‌ನಲ್ಲಿ ಬಾಂಗ್ಲಾದೇಶದ ವಾಯುಪ್ರದೇಶದ 300 ರಿಂದ 400 ಗಜಗಳ ಒಳಗೆ ಹಲವಾರು ಬಾರಿ ಒಳನುಗ್ಗಿದ್ದವು. ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಂದ ಶೆಲ್‌ಗಳು ಮತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ವರದಿ ಮಾಡಿದ್ದಾರೆ.
ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮ್ಯಾನ್ಮಾರ್ ರಾಯಭಾರಿಯನ್ನು ಈಗಾಗಲೇ ಮೂರು ಬಾರಿ ಢಾಕಾಗೆ ಕರೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!