ಹೊಸದಿಗಂತ ಡಿಜಿಟಲ್ ಡೆಸ್ಕ್ :
ದಕ್ಷಿಣ ಕೊರಿಯಾದ ಉತ್ತರ ಚುಂಗ್‌ಚಿಯೊಂಗ್ ಪ್ರಾಂತ್ಯದ ಚುಂಗ್ಜುನಲ್ಲಿ ಪ್ರವಾಸಿ ಬಸ್ ಗುರುವಾರ ಹಿಮ್ಮುಖವಾಗಿ ಪಲ್ಟಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 34 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ಘಟನೆಯು ನಗರದ ಆಗ್ನೇಯದಲ್ಲಿರುವ ಸುವಾನ್ಬೋ-ಮಿಯೋನ್‌ನಲ್ಲಿ ಸಂಭವಿಸಿದೆ.
ಬಸ್ಸು ಪ್ರಮುಖ ಪ್ರವಾಸಿ ತಾಣವಾದ ಜಿಯೊಂಗ್ಜು ನಿಂದ ಸುವಾನ್ಬೋಗೆ ತೆರಳುತ್ತಿತ್ತು, ಈ ವೇಳೆ ದುರ್ಘಟನೆ ಸಂಭವಿಸಿದೆ.
ಗಂಭೀರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 60ರ ಹರೆಯದ ಇಸ್ರೇಲಿ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.