ಉದ್ಯಮಿ ಬ್ಯಾಂಕ್‌ ಖಾತೆಗೆ ಕನ್ನ; 1 ಲಕ್ಷ ಲಪಟಾಯಿಸಿದ ಖದೀಮರು!

ಹೊಸದಿಗಂತ ವರದಿ, ಅಂಕೋಲಾ
ತಾಲೂಕಿನ ಪೀಠೋಪಕರಣ ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ ಖದೀಮರು 1 ಲಕ್ಷ ರೂಪಾಯಿ ಹಣ ಲಪಟಾಯಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಕಾಕರಮಠದಲ್ಲಿ ಫರ್ನಿಚರ್ ವ್ಯವಹಾರ ನಡೆಸುತ್ತಿರುವ ಮೋಶಿನ್ ಅಹ್ಮದ್ ಶೇಖ್ ಆಕ್ಸಿಸ್ ಬ್ಯಾಂಕ್ ಚಾಲ್ತಿ ಖಾತೆಯಿಂದ ಮಾರ್ಚ್ 12 ರಿಂದ ಮಾರ್ಚ್ 15 ರ ಅವಧಿಯಲ್ಲಿ 1055, 49ಸಾವಿರ ಮತ್ತು
50ಸಾವಿರ ಹೀಗೆ ಮೂರು ಬಾರಿ ಹಣವನ್ನು ವರ್ಗಾವಣೆ ಮಾಡಿ ವಂಚಿಸಲಾಗಿದ್ದು, ವಂಚಕರನ್ನು ಪತ್ತೆ ಹಚ್ಚುವಂತೆ ಖಾತೆದಾರರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!