ಗೆದ್ದರೆ ಸಹೋದರಿಯರಿಗೆ 1 ಲಕ್ಷ, 1 ಕೋಟಿ ಸರ್ಕಾರಿ ಉದ್ಯೋಗ: ಇದು ಆರ್‌ಜೆಡಿ ಪ್ರಣಾಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದಲ್ಲಿ ಆರ್‌ಜೆಡಿ ಶನಿವಾರ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರಕ್ಷಾ ಬಂಧನದಂದು ಬಡ ಕುಟುಂಬಗಳ ಸಹೋದರಿಯರಿಗೆ 1 ವರ್ಷಕ್ಕೆ 1 ಲಕ್ಷ ರೂ. ಹಾಗೂ 1 ಕೋಟಿ ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.

ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಆರ್‌ಜೆಡಿ ಚುನಾವಣಾ ಪ್ರಣಾಳಿಕೆ ‘ಪರಿವರ್ತನ್ ಪತ್ರ’ವನ್ನು ಬಿಡುಗಡೆ ಮಾಡಿದರು. 2024 ರ ಚುನಾವಣೆಗೆ ನಮ್ಮ ಪಕ್ಷವು 24 “ಜನ ವಚನ” (ಸಾರ್ವಜನಿಕ ಭರವಸೆಗಳು) ನೀಡುತ್ತಿದೆ ಮತ್ತು ಈ ಬದ್ಧತೆಯನ್ನು ಪೂರೈಸುತ್ತದೆ ಎಂದು ಹೇಳಿದರು.

ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, RJD ದೇಶಾದ್ಯಂತ ನಿರುದ್ಯೋಗಿ ಯುವಕರಿಗೆ 1 ಕೋಟಿ ಸರ್ಕಾರಿ ಉದ್ಯೋಗಗಳನ್ನು ಖಾತ್ರಿಪಡಿಸುತ್ತದೆ . ಈ ಪ್ರಕ್ರಿಯೆಯು ಈ ವರ್ಷದ ಸ್ವಾತಂತ್ರ್ಯ ದಿನದಂದು ಪ್ರಾರಂಭವಾಗಲಿದೆ . ಅದು ‘ಬೆರೋಜ್‌ಗಾರಿ ಸೆ ಆಜಾದಿಯಂತಿರುತ್ತದೆ. ‘(ನಿರುದ್ಯೋಗದಿಂದ ಮುಕ್ತಿ)” ಎಂದು ತಿಳಿಸಿದರು.

ನಿರುದ್ಯೋಗ ನಮ್ಮ ದೊಡ್ಡ ಶತ್ರು. ಆದರೆ ಬಿಜೆಪಿ ನಾಯಕರು ಅದರ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಅವರು 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು .ಆದರೆ ನಾವು ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು.

ಈ ವರ್ಷದ ರಕ್ಷಾ ಬಂಧನದ ಸಂದರ್ಭದಲ್ಲಿ, ನಾವು ಬಡ ಕುಟುಂಬಕ್ಕೆ ಸೇರಿದ ನಮ್ಮ ಸಹೋದರಿಯರಿಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳನ್ನು ನೀಡಲು ಪ್ರಾರಂಭಿಸುತ್ತೇವೆ ಎಂದು ಆರ್‌ಜೆಡಿ ನಾಯಕ ತಿಳಿಸಿದರು.

ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುತ್ತೇವೆ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು 500 ರೂ.ಗೆ ನೀಡುವುದಾಗಿ ಆರ್ ಜೆಡಿ ಭರವಸೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!