ಯುಎಇ ಕರಾವಳಿಯಲ್ಲಿ ಇಸ್ರೇಲ್ ಹಡಗಿನ ಮೇಲೆ ಇರಾನ್ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಇಸ್ರೇಲ್ ಹಾಗೂ ಇರಾನ್ ನಡುವೆ ಯಾವುದೇ ಕ್ಷಣದಲ್ಲೂ ಯುದ್ಧ ಆರಂಭಗೊಳ್ಳುವ ಸಾಧ್ಯತೆ ಇದೆ. ಇದರ ನಡುವೆ ಯುಎಇ ಕರಾವಳಿಯಲ್ಲಿ ಇಸ್ರೇಲ್ ಹಡಗನ್ನು ಇರಾನ್ ವಶಪಡಿಸಿಕೊಂಡಿದೆ.

ಇಸ್ರೇಲ್ ಮೂಲಕ ಸರಕು ಹಡಗನ್ನು ಯುಎಇ ಸಮುದ್ರ ತೀರದಲ್ಲಿ ಇರಾನ್ ಸೇನೆ ವಶಕ್ಕೆ ಪಡೆದಿದೆ. ಹೆಲಿಕಾಪ್ಟರ್ ಮೂಲಕ ಹಡಗು ಚೇಸ್ ಮಾಡಿದ ಇರಾನ್ ಸೇನೆ ಸೈನಿಕರನ್ನು ಸರಕು ಹಡಗಿನ ಮೇಲೆ ಇಳಿಸಿ ವಶಕ್ಕೆ ಪಡೆದಿದೆ.

ಈ ಹಡಗಿನ 25 ಸಿಬ್ಬಂದಿಗಳ ಪೈಕಿ 17 ಸಿಬ್ಬಂದಿಗಳು ಭಾರತೀಯರು ಅನ್ನೋ ಮಾಹಿತಿ ಲಭ್ಯವಾಗಿದೆ.

ಎಪ್ರಿಲ್ 1 ರಂದು ಸಿರಿಯಾದಲ್ಲಿ ಬಾಂಬ್ ಸ್ಟ್ರೈಕ್‌ನಲ್ಲಿ ಇರಾನ್ ಅಧಿಕಾರಿಗಳು ಮೃತಪಟ್ಟಿದ್ದರು. ಈ ದಾಳಿಯನ್ನು ಇಸ್ರೇಲ್ ಮಾಡಿದೆ ಎಂದು ಇರಾನ್ ಆರೋಪಿಸಿತ್ತು. ಇಷ್ಟೇ ಅಲ್ಲ ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿತ್ತು. ಇದರ ನಡುವೆ ಇರಾನ್ ಸೇನೆ ಇಸ್ರೇಲ್ ಮೂಲದ ಹಡಗಿನ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದೆ.

ಗಲ್ಫ್ ಸಮುದ್ರ ವಲಯದಲ್ಲಿ ಸಂಚರಿಸುತ್ತಿದ್ದ ವೇಳೆ ಹಡಗಿನ ಮೇಲೆ ಇರಾನ್ ದಾಳಿ ಮಾಡಿ ವಶಪಡಿಸಿಕೊಂಡಿದೆ. 25 ಸಿಬ್ಬಂದಿಗಳ ಪೈಕಿ 17 ಮಂದಿ ಭಾರತೀಯರಾಗಿದ್ದರೆ, ಇಬ್ಬರು ಪಾಕಿಸ್ತಾನ ಮೂಲದವರು. ಇನ್ನು ನಾಲ್ವರು ಪಿಲಿಪೈನ್ಸ್, ರಷ್ಯಾ ಹಾಗೂ ಎಸ್ಟೊನಿಯನ್ ದೇಶದ ಇಬ್ಬರು ಸಿಬ್ಬಂದಿಗಳಿದ್ದಾರೆ.

ಭಾರತ ಸರ್ಕಾರ ಇರಾನ್ ಅಧಿಕಾರಿಗಳ ಜೊತೆ ಸಂಪರ್ಕ ಮಾಡಿದೆ. ರಾಜತಾಂತ್ರಿಕ ಮಾರ್ಗದ ಮೂಲಕ ಭಾರತೀಯ ಸಿಬ್ಬಂದಿಗಳ ಸುರಕ್ಷತೆ ಹಾಗೂ ಬಿಡುಗಡೆ ಪ್ರಯತ್ನಗಳು ನಡೆಯುತ್ತಿದೆ ಎಂದು ಭಾರತ ವಿದೇಶಾಂಗ ಇಲಾಖೆ ಮೂಲಗಳು ಹೇಳಿವೆ.

ನಿನ್ನೆಯಷ್ಟೇ ಭಾರತ ವಿದೇಶಾಂಗ ಸಚಿವಾಲಯ ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ಕಾರ್ಮೋಡಾ ಹೆಚ್ಚಾಗುತ್ತಿರುವ ಕಾರಣ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಇರಾನ್ ಹಾಗೂ ಇಸ್ರೇಲ್ ದೇಶಗಳಿಗೆ ಪ್ರಯಾಣ ಮಾಡಬೇಡಿ ಅಥವಾ ಮುಂದೂಡಿ ಎಂದು ಭಾರತೀಯರಿಗೆ ಸೂಚಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!