ಕೇರಳದಲ್ಲಿ 1 ಲಕ್ಷ ಕೋಟಿ ರೂ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ: ಕೊಚ್ಚಿ ಮೆಟ್ರೋ ಉದ್ಘಾಟಿಸಿದ ಪ್ರಧಾನಿ ಮೋದಿ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳ ಕೊಚ್ಚಿ ಮೆಟ್ರೋ ಪೆಟ್ಟಾದಿಂದ ಎಸ್ಎನ್ ಜಂಕ್ಷನ್ ವರೆಗೆ ನಿರ್ಮಿಸಲಾಗಿರುವ ಮೊದಲ ಹಂತದ ವಿಸ್ತರಣೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಕೇರಳದ ಸಂಪರ್ಕ ಸೇತುವೆಯನ್ನು ಕೇಂದ್ರ ಮತ್ತಷ್ಟು ಬಲಪಡಿಸಲಿದೆ. ಕೇರಳದಲ್ಲಿ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿದೆ ಎಂದು ಮೋದಿ ಹೇಳಿದರು.

ನಮ್ಮದೇಶದಲ್ಲಿ ಮೊದಲ ಮೆಟ್ರೋ ಬಂದಿರುವುದು 40 ವರ್ಷಗಳ ಹಿಂದೆ. ಬಳಿಕ 30 ವರ್ಷದ ಕಾಲಘಟದ್ದಲ್ಲಿ 280 ಕಿಲೋಮೀಟರ್ಗಿಂತಲೂ ಕಡಿಮೆ ಮೆಟ್ರೋ ಕಿಲೋಮೀಟರ್ ಮೆಟ್ರೋ ನಿರ್ಮಾಣವಾಗಿದೆ. ಆದೆ ಕಳೆದ 8 ವರ್ಷಗಳಲ್ಲಿ 1,000 ಕಿಲೋಮೀಟರ್‌ಗೂ ಅಧಿಕೂ ಕಾಮಾಗಾರಿಗಳು ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಇಂದು ರಾಜ್ಯದಲ್ಲಿ ಏರ್‌ಪೋರ್ಟ್ ರೀತಿಯಲ್ಲಿ ಮೆಟ್ರೋ ನಿಲ್ದಾಣ ತಲೆ ಎತ್ತುತ್ತಿದೆ. ಎರ್ನಾಕುಲಂ ಟೌನ್ ಸ್ಟೇಶನ್, ಎರ್ನಾಲುಕುಲಂ ಜಂಕ್ಷನ್ ಸೇರಿದಂತೆ 3 ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದೆ. ಕೇರಳದ ರೈಲು ಸಂಪರ್ಕ ಆಧುನೀಕರಣಗೊಳ್ಳುತ್ತಿದೆ. ತಿರುವನಂತಪುರಂದಿಂದ ಮಂಗಳೂರು ವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಕೇರಳ ಪ್ರವಾಸ(Kerala Tourism) ದೃಷ್ಟಿಯಿಂದ ಮಾತ್ರವಲ್ಲ, ಧಾರ್ಮಿಕ ಕೇಂದ್ರಗಳ ಸಂಪರ್ಕವೂ ಸುಲಭವಾಗಿದೆ. ಏಟಮಾನೂರು, ಕೋಟಯಂ ರಸ್ತೆಗಳ ಅಭಿವೃದ್ಧಿಯಾಗಿದೆ. ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನೂಕುಲವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕೊಲ್ಲಂ ಪುನರೂರ್ ಸ್ಟೇಶನ್ ವಿದ್ಯುತ್ತೀಕರ ಮಾಡಲಾಗಿದೆ. ಇದರಿಂದ ಅತೀ ವೇಗದ ರೈಲಿಗೆ ಚಾಲನೆ ಸಿಕ್ಕಿದೆ. ಇದಿರಿಂದ ಪ್ರಾದೇಶಿಕ ಪ್ರಯಾಣಿಕರಿಗೆ ಅನೂಕೂಲ ಮಾತ್ರವಲ್ಲ. ಪ್ರವಾಸಿಗರ ಆಕರ್ಷಣೆಯಾಗಿ ಹೊರಹೊಮ್ಮಿದೆ. ಕೇರಳದ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಯಡಿ 1 ಲಕ್ಷ ಕೋಟಿ ರೂಪಾಯಿ ಯೋಜನೆಗಳ ಕಾಮಗಾರಿ ನಡೆಯುತ್ತಿದೆ. ಇದರಿಂದ ಕೇರಳದಲ್ಲಿ ಉದ್ಯೋಗ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಾಗಲಿ ಎಂದು ಮೋದಿ ಹೇಳಿದ್ದಾರೆ.

ಕೊಚ್ಚಿ ವಿಸ್ತರಿಸಿದ ಮೆಟ್ರೋ ರೈಲುಗಳು ಶೇಕಡಾ 55 ರಷ್ಟು ಸೌರಶಕ್ತಿಯಿಂದ ಚಾಲಿತವಾಗಿದೆ . ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಚ್ಚಿ ಎರಡನೇ ಹಂತದ ಮೆಟ್ರೋ ವಿಸ್ತರಣೆ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!