ಈ ವರ್ಷ 1ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್‌ ರಫ್ತು ಮಾಡುವ ಗುರಿ ಹೊಂದಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆತ್ಮನಿರ್ಭರ ಭಾರತ, ಮೇಕ್‌ ಇನ್‌ ಇಂಡಿಯಾಗಳ ಮೂಲಕ ಜಾಗತಿಕ ಪೂರೈಕೆ ಸರಪಳಿಯಲ್ಲಿ ನಿರ್ಣಾಯಕ ಸ್ಥಾನ ಗಳಿಸಿಕೊಳ್ಳಲು ಭಾರತ ದಾಪುಗಾಲಿಡುತ್ತಿದೆ. ಈ ನಿಟ್ಟಿನಲ್ಲಿ2023ರಲ್ಲಿ ಅನೇಕ ಗುರಿಗಳನ್ನು ಹಾಕಿಕೊಳ್ಳಲಾಗಿದ್ದು ಎಲೆಕ್ಟ್ರಾನಿಕ್‌ ರಫ್ತುಗಳನ್ನು ಹೆಚ್ಚಿಸುವುದು ಅವುಗಳಲ್ಲೊಂದು. 2023ರಲ್ಲಿ ಭಾರತದ ಟಾಪ್‌ 10 ರಫ್ತುಗಳಲ್ಲಿ ಮೊಬೈಲ್‌ ರಪ್ತುಗಳನ್ನು ಸೇರಿಸಬೇಕೆಂಬ ಗುರಿಯನ್ನು ಭಾರತದ ಉತ್ಪಾದನಾ ಕಂಪನಿಗಳಿಗೆ ಪ್ರಧಾನಿ ಮೋದಿ ನೀಡಿದ್ದು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೊಬೈಲ್‌ ಗಳನ್ನು ರಪ್ತು ಮಾಡುವ ಕುರಿತು ಯೋಜಿಸಲಾಗುತ್ತಿದೆ ಎಂದು ಐಟಿಸಚಿವ ರಾಜೀವ್‌ ಚಂದ್ರ ಶೇಖರ್‌ ಹೇಳಿದ್ದಾರೆ.

“ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಮತ್ತು 2023 ರಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನು ವಿಸ್ತರಿಸಲು ಪ್ರಯತ್ನಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ ಎಂದು ಪಿಟಿಐ ವರದಿ ಹೇಳಿದೆ.

ಭಾರತದಿಂದ ಮೊಬೈಲ್ ಫೋನ್ ರಫ್ತು ಕಳೆದ ವರ್ಷ ಸುಮಾರು 45,000 ಕೋಟಿ ರೂ.ಗಳಷ್ಟಿತ್ತು ಇವುಗಳಲ್ಲಿ ಪ್ರಮುಖ ಟೆಕ್‌ ದೈತ್ಯ ಕಂಪನಿಗಳಾದ ಆಪಲ್‌ ಮತ್ತು ಸ್ಯಾಮ್‌ ಸಂಗ್‌ ಗಳು ಪ್ರಾಬಲ್ಯ ಹೊಂದಿದ್ದವು. ಈ ವರ್ಷದಲ್ಲಿ ಕೇಳಬಹುದಾದ ಮತ್ತು ಧರಿಸಬಹುದಾದ (hearables & warables) ವಸ್ತುಗಳ ವಿಭಾಗ, ಐಟಿ ಹಾರ್ಡ್‌ವೇರ್, ಎಲೆಕ್ಟ್ರಾನಿಕ್ ಘಟಕಗಳು ಇತ್ಯಾದಿಗಳಲ್ಲಿ ಜಾಗತಿಕ ಪಾಲನ್ನು ಹೆಚ್ಚಿಸಲು ಮೊಬೈಲ್ ಫೋನ್‌ಗಳನ್ನು ಮೀರಿ ಎಲೆಕ್ಟ್ರಾನಿಕ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!