ಮಹೇಶ್ ಬಾಬು ಫೌಂಡೇಶನ್‌ನಿಂದ ಮತ್ತೊಂದು ಹೆಜ್ಜೆ: ಫೌಂಡೇಶನ್‌ಗೆ ಸಿತಾರ ಕೊಡುಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಅನೇಕರಿಗೆ ಲೈಫ್ ಕೊಟ್ಟು ರಿಯಲ್ ಹೀರೋ ಅನ್ನಿಸಿಕೊಂಡಿದ್ದಾರೆ. ಮಹೇಶ್ ಈಗಾಗಲೇ ಆಂಧ್ರ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ 1000 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿ ಆ ಕುಟುಂಬಗಳಲ್ಲಿ ಸಂತಸ ತುಂಬಿದ್ದಾರೆ. ಮಹೇಶ್ ಬಾಬು ಫೌಂಡೇಶನ್ ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾತ್ರವಲ್ಲದೆ ಉಚಿತ ವೈದ್ಯಕೀಯ ಶಿಬಿರಗಳನ್ನು ಮಾಡಿ ಅವರು ದತ್ತು ಪಡೆದಿರುವ ಗ್ರಾಮಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಮಹೇಶ್ ಬಾಬು ಫೌಂಡೇಶನ್ ಇತ್ತೀಚೆಗೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. https://www.maheshbabufoundation.org/ ಹೆಸರಿನ ವೆಬ್‌ಸೈಟ್ ಅನ್ನು ಸ್ಥಾಪಿಸಲಾಗಿದೆ. ಹೊಸ ವರ್ಷದ ಮೊದಲ ದಿನದಂದು ಸಿತಾರಾ ಅಧಿಕೃತವಾಗಿ ಈ ವೆಬ್‌ಸೈಟ್ ಅನ್ನು ಪ್ರಾರಂಭಿಸಿದರು. ಸಿತಾರಾ ಈ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಿ ಈ ಸೈಟ್ ಪ್ರಾರಂಭಿಸಲು ನನಗೆ ತುಂಬಾ ಸಂತೋಷವಾಗಿದೆ. ನಾನು ಯಾವಾಗಲೂ ನನ್ನ ತಂದೆಯ ಒಳ್ಳೆಯ ಕಾರ್ಯಗಳಲ್ಲಿ ಭಾಗವಾಗಲು ಬಯಸುತ್ತೇನೆ. ಈ ತಿಂಗಳು ನಾನು ನನ್ನ ಪಾಕೆಟ್ ಮನಿಯನ್ನು ಈ ಫೌಂಡೇಶನ್‌ಗೆ ನೀಡುತ್ತಿದ್ದೇನೆ. ನೀವೂ ದೇಣಿಗೆ ನೀಡಲು ಬಯಸಿದರೆ ಈ ತಾಣಕ್ಕೆ ಹೋಗಿ ದೇಣಿಗೆ ನೀಡಬಹುದು.

ದೇಣಿಗೆ ನೀಡಲು ಬಯಸುವ ಯಾರಾದರೂ ಮಹೇಶ್ ಬಾಬು ಫೌಂಡೇಶನ್ ವೆಬ್‌ಸೈಟ್ ಮೂಲಕ ದೇಣಿಗೆ ನೀಡಬಹುದು. ಇದಲ್ಲದೇ, ಯಾರಾದರೂ ತಮ್ಮ ಮಗುವಿಗೆ ಹೃದಯ ಆಪರೇಷನ್ ಮಾಡಿಸಬೇಕೆಂತಿದ್ದರೆ ಅವರು ಈ ಸೈಟ್ ಮೂಲಕ ವಿನಂತಿಯನ್ನು ಸಹ ಮಾಡಬಹುದು. ಮತ್ತೊಂದು ಕಾರ್ಯ ಮಾಡುವ ಮೂಲಕ ಮಹೇಶ್‌ ಬಾಬು ಮತ್ತೊಂದು ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!