ತೈವಾನ್ ಸುತ್ತ ಚೀನಾ ಹದ್ದಿನ ಕಣ್ಣು: ಹಡಗುಗಳು, 10ಯುದ್ಧವಿಮಾನಗಳ ಹಾರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತೈವಾನ್ ವಿಷಯದಲ್ಲಿ ಚೀನಾ ಮತ್ತೊಮ್ಮೆ ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಂಡಂತಿದೆ. ಸುಮಾರು 10 ಚೀನಾದ ಯುದ್ಧವಿಮಾನಗಳು ಮತ್ತು 2 ಹಡಗುಗಳು ತೈವಾನ್ ಭೂಪ್ರದೇಶದ ಸುತ್ತಲೂ ಕಂಡುಬಂದಿವೆ. ತೈವಾನ್‌ನ ರಾಷ್ಟ್ರೀಯ ರಕ್ಷಣಾ ಇಲಾಖೆ (ಎಂಎನ್‌ಡಿ) ಈ ಕುರಿತು ಮಾಹಿತಿ ನೀಡಿದೆ.

ಚೀನಾದ ಯುದ್ಧ ವಿಮಾನಗಳು ಮತ್ತು ಹಡಗುಗಳು ಸೋಮವಾರ ಬೆಳಿಗ್ಗೆ 6 ರಿಂದ ಮಂಗಳವಾರ ಬೆಳಿಗ್ಗೆ 6 ರ ನಡುವೆ ಓಡಾಡಿವೆ ಎಂದು ತೈವಾನ್ ಗಮನಿಸಿದೆ. ತಕ್ಷಣ ಎಚ್ಚೆತ್ತ ತೈವಾನ್ ಹಲವು ಕ್ರಮಗಳನ್ನು ಕೈಗೊಂಡಿದ್ದು, ಈ ಬಾರಿ ಚೀನಾದ ಯುದ್ಧ ವಿಮಾನಗಳು ಮತ್ತು ಹಡಗುಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿಲ್ಲ ಎಂದು ತಿಳಿಸಿವೆ.

ಒಂದು ವಾರದ ಹಿಂದೆ, ತೈವಾನ್ ತನ್ನ ದೇಶದ ಸುತ್ತಲೂ 28 ಚೀನಾದ ಯುದ್ಧ ವಿಮಾನಗಳು ಮತ್ತು ನಾಲ್ಕು ಹಡಗುಗಳನ್ನು ಪತ್ತೆಹಚ್ಚಿದೆ. ಈ ತಿಂಗಳು ಒಟ್ಟು 292 ಯುದ್ಧ ವಿಮಾನಗಳು ಮತ್ತು 76 ಹಡಗುಗಳನ್ನು ಕಳುಹಿಸಲಾಗಿದೆ. ಸೆಪ್ಟೆಂಬರ್ 2020 ರಿಂದ, ಚೀನಾ ತೈವಾನ್ ಸುತ್ತಲೂ ಇಂತಹ ಕ್ರಮಗಳನ್ನು ನಡೆಸುತ್ತಿದೆ.

ತೈವಾನ್ ಅನ್ನು ತನ್ನ ಭೂಪ್ರದೇಶವೆಂದು ಹೇಳಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ. ಚೀನಾದ ಯುದ್ಧ ವಿಮಾನಗಳು ತೈವಾನ್ ನ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿ ಸಂಚಲನ ಮೂಡಿಸಿವೆ. ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ವಿಷಯದಲ್ಲಿ ತೈವಾನ್ ಮೇಲೆ ಒತ್ತಡವನ್ನು ಹೆಚ್ಚಿಸಲು ಚೀನಾ ಸಂಚು ರೂಪಿಸುತ್ತಿದೆ. ತಮ್ಮ ಸೇನಾ ಸಾಮರ್ಥ್ಯವನ್ನು ಪರೀಕ್ಷಿಸಲು ತಾವು ಸೇನಾ ಸಮರಾಭ್ಯಾಸ ನಡೆಸುತ್ತಿದ್ದೇವೆ ಎಂದು ಚೀನಾ ಹೇಳಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!