ಹೊಸದಿಗಂತ ವರದಿ ಮಂಡ್ಯ:
ಮಂಡ್ಯದ ಹಲಗೂರು ಸಮೀಪದ ಗಾಣಾಳು ಗ್ರಾಮದ ಜಮೀನೊಂದರಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಉರಗ ತಜ್ಞ ಕೃಷ್ಣ ಹಿಡಿದು ಅರಣ್ಯ ಇಲಾಖೆ ಸಮ್ಮುಖದಲ್ಲಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.
ಮೂಲತಃ ಗಾಣಾಳು ಗ್ರಾಮದ ವಾಸಿ ಹಾಗೂ ತೋಟದ ಮೇಲ್ವಿಚಾರಕ ಶ್ರೀನಿವಾಸ್ ಮಾತನಾಡಿ, ನಮ್ಮ ಜಮೀನಿನ ಕೃಷಿ ಹೊಂಡದ ಬಳಿ ಇರುವ ಪೊದೆಯೊಂದರಲ್ಲಿ ಹಾವು ಕಾಣಿಸಿಕೊಂಡ ಹಿನ್ನೆಲೆ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಹೆದರಿ ಓಡಿ ಬಂದರು.
ತಕ್ಷಣ ನಾನು ಉರುಗ ತಜ್ಞ ಕೃಷ್ಣಾರಿಗೆ ವಿಷಯ ತಿಳಿಸಿದೆ ಮೇರೆಗೆ ಅವರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮುತ್ತತ್ತಿ ಅರಣ್ಯಕ್ಕೆ ಬಿಟ್ಟಿರುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ:
ಉರಗ ತಜ್ಞ ಕೃಷ್ಣ ಮಾತನಾಡಿ, ನಮ್ಮ ಜಗದೀಶ ಮತ್ತು ನಾನು ಇದುವರೆಗೂ ಹಲಗೂರು ವ್ಯಾಪ್ತಿಯಲ್ಲಿ ಸುಮಾರು 15 ಹೆಬ್ಬಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿರುತ್ತೇವೆ. ಯಾರಾದರೂ ಯಾವುದೇ ತರಹದ ಹಾವುಗಳನ್ನು ಕಂಡರೆ ಅದನ್ನು ಹೊಡೆಯಬೇಡಿ ತಕ್ಷಣ ನಮಗೆ ವಿಷಯ ತಿಳಿಸಿದರೆ ನಾವು ಬಂದು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತೇವೆ ಎಂದು ಮನವಿ ಮಾಡಿದರು.



