ಪ್ರತಿ ದಿನದ ಕೂಲಿಯ ಅನುದಾನ ಶೇ.10ರಷ್ಟು ಏರಿಕೆ: ಕೇಂದ್ರ ಸರ್ಕಾರ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರವು ದೇಶದ ವಿವಿಧ ರಾಜ್ಯಗಳಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ದೈನಂದಿನ ಕೂಲಿ ಅನುದಾನವನ್ನು 4 ರಿಂದ 10 ಪ್ರತಿಶತದಷ್ಟು ಹೆಚ್ಚಿಸಿದೆ. ಕರ್ನಾಟಕಕ್ಕೆ ಶೇ.10ರಷ್ಟು ನೆರವನ್ನು ಹೆಚ್ಚಿಸಲಾಗಿದೆ.

ಹಾಗಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ ದಿನಗೂಲಿ ಈ ಹಿಂದೆ ಇದ್ದ 316 ರೂ. ಈಗ 349 ರೂಪಾಯಿಗೆ ಏರಿಕೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ವಿವಿಧ ತೆರಿಗೆ ದರಗಳನ್ನು ನಿಗದಿಪಡಿಸಿದೆ.

ಹರಿಯಾಣದಲ್ಲಿ ಗರಿಷ್ಠ 374 ನಿಗದಿಯಾಗಿದೆ. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ಗಳು ಅತಿ ಕಡಿಮೆ ಅಂದರೆ 234 ನಿಗದಿಯಾಗಿದೆ. ಈ ದರವು ಮಾರ್ಚ್ 27 ರಂದು ಮಾಡಿದ ನಂತರದ ದರವಾಗಿದೆ. ಪರಿಷ್ಕೃತ ದರಗಳ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆದೇಶ ಹೊರಡಿಸಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡಕ್ಕೆ ಅತಿ ಕಡಿಮೆ 7 ರು. ಏರಿಕೆ ಮಾಡಲಾಗಿದೆ. ಈ ರಾಜ್ಯಗಳಲ್ಲಿ ಕೂಲಿ ದರವನ್ನು 237 ರೂ.ಗೆ ಹೆಚ್ಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!