ಇಂದು ತವರಿನಲ್ಲಿ RCB v/s KKR ಹೈವೋಲ್ಟೇಜ್ ಪಂದ್ಯ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೇಗಿದೆ ಸಿದ್ಧತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ಸ್ಟೇಡಿಯಂನಲ್ಲಿ ಇದು ಆರ್‌ಸಿಬಿಯ ಸತತ ಎರಡನೇ ಪಂದ್ಯವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಟಾ ಐಪಿಎಲ್ 2024 ಕ್ರಿಕೆಟ್ ಪಂದ್ಯಾವಳಿಯ ನಂತರ, ಸುಗಮ ಸಂಚಾರವನ್ನು ವ್ಯವಸ್ಥೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬದಲಾವಣೆಗಳು ಶುಕ್ರವಾರ ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ ಜಾರಿಗೆ ಬರಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

RCB ತಂಡ IPL 2024 ರ ಮೂರನೇ ಪಂದ್ಯವನ್ನು ಆಡುತ್ತಿದೆ. KKR ತಮ್ಮ ಎರಡನೇ ಪಂದ್ಯಕ್ಕಾಗಿ ಗಾರ್ಡನ್ ಸಿಟಿಗೆ ಆಗಮಿಸಿದೆ. ಶ್ರೇಯಸ್ ಅಯ್ಯರ್‌ ತಂಡ ತನ್ನ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹೈದರಾಬಾದ್‌ ಅನ್ನು ಸೋಲಿಸಿತ್ತು. ಎರಡು ಪಂದ್ಯಗಳಲ್ಲಿ, RCB ಪಂಜಾಬ್ ವಿರುದ್ಧ ಕೊನೆಯ ಪಂದ್ಯವನ್ನು ಗೆದ್ದು ಎರಡು ಅಂಕಗಳನ್ನು ಪಡೆದುಕೊಂಡಿತ್ತು. ತಂಡವು ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ ಮತ್ತು ಕೋಲ್ಕತ್ತಾ 1 ಪಂದ್ಯದಿಂದ 2 ಅಂಕಗಳೊಂದಿಗೆ 4 ನೇ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!