Tuesday, March 28, 2023

Latest Posts

BIG NEWS | ಟರ್ಕಿಯಲ್ಲಿ ಸಿಲುಕಿದ 10 ಭಾರತೀಯರು: ಬೆಂಗಳೂರು ಮೂಲದ ವ್ಯಕ್ತಿ ನಾಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೀಕರ ಭೂಕಂಪನಕ್ಕೆ ತತ್ತರಿಸಿದ ಟರ್ಕಿಯಲ್ಲಿ ಓರ್ವ ಭಾರತೀಯ ನಾಪತ್ತೆಯಾಗಿದ್ದಾನೆ ಎಂದು ಸರ್ಕಾರ ಇಂದು ತಿಳಿಸಿದೆ.

ಒಟ್ಟು 10 ಭಾರತೀಯರು ದೇಶದ ದೂರದ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.ಆದ್ರೆ, ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ನಾವು ಟರ್ಕಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದೇವೆ. 10 ಭಾರತೀಯರು ಪೀಡಿತ ಪ್ರದೇಶಗಳ ದೂರದ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ ಆದರೆ ಅವರು ಸುರಕ್ಷಿತವಾಗಿದ್ದಾರೆ. ವ್ಯಾಪಾರ ಪ್ರವಾಸದಲ್ಲಿದ್ದ ಒಬ್ಬ ಭಾರತೀಯ ಪ್ರಜೆ ಕಾಣೆಯಾಗಿದ್ದಾನೆ. ನಾವು ಅವರ ಕುಟುಂಬ ಮತ್ತು ಬೆಂಗಳೂರಿನಲ್ಲಿರುವ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ಪಶ್ಚಿಮ ಕಾರ್ಯದರ್ಶಿ ಸಂಜಯ್ ವರ್ಮಾ ಹೇಳಿದ್ದಾರೆ.

ಸದ್ಯ ಟರ್ಕಿ ಮತ್ತು ಸಿರಿಯಾದಲ್ಲಿ ಶೋಧ ಮುಂದುವರಿದಿದ್ದು, ಒಟ್ಟು 11,000 ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!