ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ ಶೋನಲ್ಲಿ ಶನಿವಾರ ಗುಂಡಿನ ದಾಳಿ ನಡೆದಿದ್ದು, ಹತ್ತು ಮಂದಿ ರೇಸರ್‌ಗಳು ಸಾವನ್ನಪ್ಪಿದ್ದಾರೆ. ರೇಸ್ ವೇಳೆ ಎರಡು ಟೀಮ್‌ಗಳ ನಡುವೆ ವಾಗ್ವಾದದಿಂದ ಗುಂಡಿನ ದಾಳಿ ನಡೆದಿದೆ ಎಂಬುದು ಪ್ರಾಥಮಿಕ ಮಾಹಿತಿ. ಇದರಲ್ಲಿ 10 ರೇಸರ್ ಗಳು ಸಾವನ್ನಪ್ಪಿದ್ದು, ಒಂಬತ್ತು ಜನ ಗಾಯಗೊಂಡಿದ್ದಾರೆ. ಅಮೆರಿಕ ದಶಕಗಳಿಂದ ಈ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಅಮೆರಿಕದಲ್ಲಿ ಬಂದೂಕು ಸಂಸ್ಕೃತಿಗೆ ಸಂಬಂಧಿಸಿದ ಘಟನೆಗಳು ಮುನ್ನೆಲೆಗೆ ಬರುತ್ತಿರುವುದು ಇದೇ ಮೊದಲಲ್ಲ. ಸಾರ್ವಜನಿಕ ಸ್ಥಳಗಳಲ್ಲಿ, ಕೆಲವೊಮ್ಮೆ ಬಾರ್‌ಗಳು, ಕ್ಲಬ್‌ಗಳು, ರೆಸ್ಟೋರೆಂಟ್‌ಗಳಲ್ಲಿ, ಪುಂಡರು ಗುಂಡಿನ ದಾಳಿ ನಡೆಸುತ್ತಲೇ ಇದ್ದಾರೆ. ಕ್ಯಾಲಿಫೋರ್ನಿಯಾ ಸ್ಟೇಟ್ ಅಟಾರ್ನಿ ಜನರಲ್ ಅವರು ಎನ್ಸೆನಾಡಾ ನಗರದ ಸ್ಯಾನ್ ವಿಸೆಂಟೆ ಪ್ರದೇಶದಲ್ಲಿ ಆಲ್-ಟೆರೈನ್ ಕಾರ್ ರೇಸಿಂಗ್ ಪ್ರದರ್ಶನದ ಸಂದರ್ಭದಲ್ಲಿ ದಾಳಿ ನಡೆದಿದೆ ಎಂದು ಹೇಳಿದ್ದಾರೆ.
ದಾಳಿಕೋರರು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಬೂದು ಬಣ್ಣದ ವ್ಯಾನ್‌ನಿಂದ ಕೆಳಗಿಳಿದು ಗುಂಡಿನ ದಾಳಿ ನಡೆಸಿದ್ದಾರೆ. ಮಾಹಿತಿ ಪಡೆದ ನಂತರ, ಪೊಲೀಸರು, ನೌಕಾಪಡೆಗಳು, ಅಗ್ನಿಶಾಮಕ ದಳ ಮತ್ತು ಮೆಕ್ಸಿಕನ್ ರೆಡ್‌ಕ್ರಾಸ್ ಎಲ್ಲರೂ ಘಟನಾ ಸ್ಥಳಕ್ಕೆ ಧಾವಿಸಿದರು. 9 ಜನ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೆಲವರ ಸ್ಥಿತಿ ಗಂಭೀರವಾಗಿದೆ. ಅಮೆರಿಕ ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಇಂತಹ ಪ್ರಕರಣಗಳು ದಿನವೂ ಎಲ್ಲೋ ಬರುತ್ತಲೇ ಇರುತ್ತವೆ.