ಸಿದ್ದು ಸರ್ಕಾರಕ್ಕೆ 100 ದಿನ, ನೂರೆಂಟು ಕರ್ಮಕಾಂಡ : ವಿಡಿಯೋ ಮೂಲಕ ಕಾಲೆಳೆದ ಬಿಜೆಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ಬಂದು ನೂರು ದಿನಗಳು ಕಳೆದಿವೆ. ನೂರು ದಿನ ಪೂರೈಸಲು ಸಹಕರಿಸಿದ ಜನರಿಗೆ ಧನ್ಯವಾದಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ವಿಡಿಯೋ ಮೂಲಕ ಕಾಂಗ್ರೆಸ್ ಸರ್ಕಾರ ನೂರು ದಿನದಲ್ಲಿ ಏನೇನು ಮಾಡಿದೆ ಎನ್ನುವುದರ ಬಗ್ಗೆ ವ್ಯಂಗ್ಯವಾಡಿದೆ. ಜನರಿಗೆ ಕಾಣುವ ರೀತಿ ಗ್ಯಾರೆಂಟಿ ಜಾರಿ ಮಾಡುತ್ತಾ ಹಿಂದೆ ಸಾಕಷ್ಟು ಕರ್ಮಕಾಂಡಗಳನ್ನು ಅಡಗಿಸಿದೆ ಎಂದು ಹೇಳಿದೆ.

ಬೆಲೆ ಏರಿಕೆ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ, ಶ್ಯಾಡೋ ಸಿಎಂ, ವರ್ಗಾವಣೆ ದಂಧೆ, ರೈತರ ಆತ್ಮಹತ್ಯೆ, ಕಲುಷಿತ ನೀರು, ಕಳಪೆ ಆಹಾರ, ಗುತ್ತಿಗೆದಾರರ ಪ್ರತಿಭಟನೆ, ಉಡುಪಿ ಘಟನೆ, ಸುಳ್ಳು ಸುದ್ದಿ, ಮರಳು ಮಾಫಿಯಾ ಹೀಗೆ ಒಂದಾ ಎರಡಾ? ಕಾಂಗ್ರೆಸ್ ಮಾಡಿದ್ದು? ಇದು ಕಾಂಗ್ರೆಸ್ ಸಾಧನೆ ಅಲ್ಲ ಕರ್ಮಕಾಂಡ ಎಂದು ಬಿಜೆಪಿ ವ್ಯಂಗ್ಯವಾಡಿದೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!