Tuesday, March 28, 2023

Latest Posts

ಜಮ್ಮು ಕಾಶ್ಮೀರದ ದೋಡಾದಲ್ಲಿ ತಲೆಯೆತ್ತಿದ 100 ಅಡಿ ಎತ್ತರದ ರಾಷ್ಟ್ರ ಧ್ವಜ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ ‌:

ಭಾರತೀಯ ಸೇನೆಯು ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ 100 ಅಡಿ ಎತ್ತರದಲ್ಲಿ ಭಾರತೀಯ ರಾಷ್ಟ್ರ ಧ್ವಜವನ್ನು ಸ್ಥಾಪಿಸಿದೆ.

ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನೂರು ಅಡಿ ಎತ್ತರದ ರಾಷ್ಟ್ರಧ್ವಜವನ್ನು ಭಾರತೀಯ ಸೇನೆಯು ಸ್ಥಾಪನೆ ಮಾಡಿದ್ದು, ಭಾರತೀಯ ಸೇನೆಗೆ ಮಾತ್ರವಲ್ಲದೆ ಆ ಪ್ರದೇಶದ ನಿವಾಸಿಗಳಿಗೂ ಹಾಗೂ ಭಾರತೀಯ ನಾಗರಿಕರಿಗೂ ಹೆಮ್ಮೆಯ ಸಂಗತಿಯಾಗಿದೆ.

ದೋಡಾದ ಸುಂದರಬೆಟ್ಟಗಳ ನಡುವೆ ಸ್ಥಾಪಿಸಲಾದ ಈ ಧ್ವಜವು ಸೈನ್ಯ ಮತ್ತು ಸ್ಥಳೀಯ ಜನರಲ್ಲಿ ರಾಷ್ಟ್ರೀಯತೆ ಭಾವನೆಯನ್ನು ಮೂಡಿಸುತ್ತದೆ. ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಸ್ಥಳೀಯರು ಭಾರತೀಯ ಸೇನೆಗೆ ಕೃತಜ್ಞತೆ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!