Friday, December 8, 2023

Latest Posts

ಮದುವೆ ಕಾರ್ಯಕ್ರಮದಲ್ಲಿ ಅಗ್ನಿ ದುರಂತ: 100ಮಂದಿ ಸಜೀವ ದಹನ, 150 ಜನರ ಸ್ಥಿತಿ ಗಂಭೀರ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆ ಕಾರ್ಯಕ್ರಮದ ಹಾಲ್‌ನಲ್ಲಿ ಉಂಟಾದ ಆಗ್ನಿ ದುರಂತಕ್ಕೆ 150ಮಂದಿ ಸಜೀವ ದಹನವಾಗಿರುವ ಘಟನೆ ಉತ್ತರ ಇರಾಕಿನ ಅಲ್-ಹಮ್ದಾನಿಯಾ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯಲ್ಲಿ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾಕ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿಯಿಂದಾಗಿ ಗಾಯಗೊಂಡ 150 ಜನರನ್ನು ಹಮ್ದಾನಿಯಾ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿವಾಹ ಸಮಾರಂಭದಲ್ಲಿ ಬಳಸಿದ ಪಟಾಕಿಗಳೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ ಎಂದು ಇರಾಕ್‌ನ ನಾಗರಿಕ ರಕ್ಷಣಾ ಇಲಾಖೆ ಹೇಳಿದೆ.

ಬೆಂಕಿಯಿಂದಾಗಿ ಈವೆಂಟ್ ಹಾಲ್ ಬೆಂಕಿಗೆ ಆಹುತಿಯಾಗಿದೆ. ಫೆಡರಲ್ ಇರಾಕಿ ಅಧಿಕಾರಿಗಳು ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ರವಾನಿಸಿದರು. ಈ ಭೀಕರ ಘಟನೆಯಿಂದ ಸ್ಥಳದಲ್ಲಿ ಎಲ್ಲೆಂದರಲ್ಲಿ ಸುಟ್ಟ ಶವಗಳು ಕಂಡು ಬಂದಿವೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಗಾಯಾಳುಗಳನ್ನು ರಕ್ಷಿಸಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!