Friday, December 8, 2023

Latest Posts

ದಿನಭವಿಷ್ಯ| ಯಾವ ಕಾರ್ಯವೂ ಸುಲಲಿತವಾಗಿ ಸಾಗುತ್ತಿಲ್ಲ ಎಂಬ ಚಿಂತೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ವೃತ್ತಿಯಲ್ಲಿ ಸಾಧಾರಣ ಯಶಸ್ಸು. ಉದ್ಯೋಗದ ಒತ್ತಡ ಹೆಚ್ಚು. ಸಹೋದ್ಯೋಗಿ ಜತೆ ವಿರಸ. ಹಣದ ವ್ಯವಹಾರದಲ್ಲಿ  ಹೆಚ್ಚು ಎಚ್ಚರ ವಹಿಸಿರಿ.

ವೃಷಭ
ಕಾರ್ಯ ಸಿದ್ಧಿಗೆ ಹೆಚ್ಚು ಶ್ರಮ ಪಡಬೇಕು. ಆದರೂ ಕಾರ್ಯ ಸಂಪೂರ್ಣವಾಗದು. ಆತ್ಮೀಯ ಸಂಬಂಧದಲ್ಲಿ ಅಪಸ್ವರ. ಎಚ್ಚರಿಕೆ ಯಿಂದ ನಿಭಾಯಿಸಿ.

ಮಿಥುನ
ಕೆಲಸದ ಒತ್ತಡ ಅಧಿಕ. ಸಂಗಾತಿ ಜತೆಗಿನ ನಡೆನುಡಿಯಲ್ಲಿ ಎಚ್ಚರವಿರಲಿ. ತಪ್ಪರ್ಥ ಮೂಡದಂತೆ ಎಚ್ಚರ ವಹಿಸಿ. ಸಂಘರ್ಷ ಉಂಟಾದೀತು.

ಕಟಕ
ಇತರರು ಮಾಡುವ ತಪ್ಪಿಗೆ ನೀವು ತಲೆ ಕೊಡಬೇಕಾಗುವುದು. ಆತ್ಮೀಯರ ಜತೆ ಜಗಳವಾದೀತು. ಖರ್ಚಿನ ಮೇಲೆ ನಿಗಾ ಇಡಬೇಕು.

ಸಿಂಹ
ಮನೆಯಲ್ಲೂ, ವೃತ್ತಿಯಲ್ಲೂ ಹೆಚ್ಚುವರಿ ಹೊಣೆಗಾರಿಕೆ. ನೆಗೆಟಿವ್ ಚಿಂತನೆಗಳು ಮನಸ್ಸನ್ನು ಕಾಡಬಹುದು. ಆರ್ಥಿಕ ಪ್ರಗತಿ ಸಮಾಧಾನ ತರಲಾರದು.

ಕನ್ಯಾ
ನಿಮ್ಮ ನಿರ್ವಹಣೆ ನಿಮಗೇ ತೃಪ್ತಿ ತರುವುದಿಲ್ಲ. ಇನ್ನೇನೋ ಹೆಚ್ಚಿನದ್ದನ್ನು ಅಪೇಕ್ಷಿಸುವಿರಿ. ಇತರರ ಜತೆಗೆ ಹೊಂದಾಣಿಕೆಯ ಕೊರತೆ.

ತುಲಾ
ಗೊಂದಲದ ಮನಸ್ಥಿತಿ. ಯಾವ ಕಾರ್ಯವೂ ಸುಲಲಿತವಾಗಿ ಸಾಗುತ್ತಿಲ್ಲ ಎಂಬ ಚಿಂತೆ. ಸಮಾಧಾನಚಿತ್ತ ಒಳ್ಳೆಯದು. ಎಲ್ಲ ಸರಿಯಾಗುವುದು.

ವೃಶ್ಚಿಕ
ಯಾವುದೋ ವಿಷಯ ನಿಮ್ಮ ಅಸಮಾಧಾನ ಹೆಚ್ಚಿಸುವುದು. ಕೆಲವರ ಕುರಿತಂತೆ ವೈರ ಮೂಡುವುದು. ಅಂತಹ ಮನಸ್ಥಿತಿ ತೊಡೆದು ಹಾಕುವುದು ಒಳಿತು.

ಧನು
ಕೆಲವು ಬೆಳವಣಿಗೆ ಚಿಂತೆಗೆ ಕಾರಣ ಆಗುವುದು. ಆತ್ಮೀಯರ ಸಹಕಾರದಿಂದ ಎಲ್ಲವೂ ಸರಿಯಾಗುವುದು. ಬಂಧುಗಳಿಂದ ಸಾಂತ್ವನ, ಸಮಾಧಾನ.

ಮಕರ
ವೃತ್ತಿಯಲ್ಲಿ ನೀವು ಬಯಸಿದ ಬೆಳವಣಿಗೆ. ಆರ್ಥಿಕ ಪ್ರಗತಿ. ಮುನಿಸಿನಿಂದ ದೂರವಾದವರು ಸಮೀಪವಾಗುವರು. ಬಂಧುತ್ವ ವೃದ್ಧಿ.

ಕುಂಭ
ವೃತ್ತಿಯಲ್ಲಿ ಅಡ್ಡಿಗಳು, ನಿರಾಶೆ. ಸಹೋದ್ಯೋಗಿ ಜತೆ ಹೊಂದಾಣಿಕೆಯ ಕೊರತೆ. ಸಂಗಾತಿ ಜತೆಗೆ ಭಿನ್ನಮತ. ಹಣಕಾಸು ತೊಂದರೆ. ಒಟ್ಟಿನಲ್ಲಿ ಅಪ್ರಿಯ ದಿನವಿದು.

ಮೀನ
ಸರಿಯಾದ ಯೋಜನೆ ಇಲ್ಲದಿದ್ದರೆ ನಿಮ್ಮ ಕೆಲಸ ಕೆಟ್ಟೀತು. ಕುಟುಂಬ ಸದಸ್ಯರ ಜತೆ ಹೊಂದಾಣಿಕೆ ಇಲ್ಲದಿದ್ದರೆ ಗೊಂದಲ, ವೈಮನಸ್ಯ ಸಂಭವ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!