ಉತ್ತರ ಪ್ರದೇಶ: ಸನಾತನ ಧರ್ಮಕ್ಕೆ 100 ಮಂದಿ ವಾಪಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಖುರ್ಜಾದ ಕಾಳಿಂದಿ ಕುಂಜ್ ಪ್ರದೇಶದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೇತೃತ್ವದಲ್ಲಿ ಬಿಜೆಪಿ ಶಾಸಕಿ ಮೀನಾಕ್ಷಿ ಸಿಂಗ್ ಅವರ ಸಮ್ಮುಖದಲ್ಲಿ ನಡೆದ ‘ಘರ್ ವಾಪಸಿ (ಬೇರಿಗೆ ಹಿಂತಿರುಗಿ)’ ಕಾರ್ಯಕ್ರಮದಲ್ಲಿ ಸುಮಾರು 100 ಜನರು ಹಿಂದೂ ಧರ್ಮಕ್ಕೆ ಮರಳಿಬಂದಿದ್ದಾರೆ.
ಭಾನುವಾರ ನಡೆದ ಕಾರ್ಯಕ್ರಮದಲ್ಲಿ 20 ಕುಟುಂಬಗಳ ಸುಮಾರು 100 ಮಂದಿ ಸನಾತನ ಧರ್ಮಕ್ಕೆ ಮರಳಿದ್ದು, ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಸ್ಥಳೀಯ ಶಾಸಕರು ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಖುರ್ಜಾ ಮೂಲದ ಸಾಮಾಜಿಕ ಸಂಘಟನೆಯ ಅಧ್ಯಕ್ಷ ಹೇಮಂತ್ ಸಿಂಗ್, “ವರ್ಷಗಳ ಹಿಂದೆ ಕೆಲವು ಗೊಂದಲಗಳಿಂದಾಗಿ ಸನಾತನ ಧರ್ಮವನ್ನು ತೊರೆದ ಜನರನ್ನು ಮರಳಿ ಕರೆತರಲು” ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ಹೇಳಿದರು.
“ಇಡೀ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ನಡೆಸಲಾಗಿದೆ. “ಹವನ” ನಡೆಸುವ ಮೊದಲು ಕುಟುಂಬಗಳು ಅಫಿಡವಿಟ್‌ಗಳಲ್ಲಿ ತಮ್ಮ ಒಪ್ಪಿಗೆಯನ್ನು ನೀಡಿವೆ” ಎಂದು ಅವರು ಪ್ರತಿಪಾದಿಸಿದರು. ಧರ್ಮಕ್ಕೆ ಮರಳಿದವರಲ್ಲಿ ಒಬ್ಬರಾದ ಸಂದೀಪ್ ವಾಲ್ಮೀಕಿ, “ನಾನು ಹಲವಾರು ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಗಾಗಿ ಸ್ಥಳೀಯ ಚರ್ಚ್‌ನಲ್ಲಿ ಪ್ರಾರ್ಥನೆಗೆ ಹಾಜರಾಗಲು ಪ್ರಾರಂಭಿಸಿದ್ದೆ. ಈಗ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!