2022ರಲ್ಲಿ ಜಾಗತಿಕವಾಗಿ ನಿರಾಶ್ರಿತರಾದವರ ಸಂಖ್ಯೆ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ 2022 ಕೊನೆಯಾಗಲಿದೆ. ಪ್ರಪಂಚಾದ್ಯಂತ 2022ರಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ. ನೆರವಿನ ಅಗತ್ಯ ಇರುವವರಿಗೆ ವಿಶ್ವಸಂಸ್ಥೆ ನೆರವು ನೀಡುವುದನ್ನು ಮುಂದುವರಿಸಿದೆ ಎಂದು ವಿಶ್ವಸಂಸ್ಥೆಯ ಹೈಕಮಿಷನ್ ಹೇಳಿದೆ.

ಇದು ಎಂದಿಗೂ ಘಟಿಸಬಾರದಾದ ಘಟನೆ ಎಂದು ಯುಎನ್‌ಎಚ್‌ಸಿಆರ್ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಅವರು ಹೇಳಿದ್ದಾರೆ. 2021 ರಲ್ಲಿ ಸುಮಾರು ಒಂಬತ್ತು ಕೋಟಿಗೂ ಹೆಚ್ಚು ಮಂದಿ ವಲಸೆ ಹೋಗಿದ್ದರು. ವಲಸೆಗೆ ಮತ್ತೊಂದು ಪ್ರಮುಖ ಕಾರಣ ಹಿಂಸಾಚಾರ.

ಉಕ್ರೇನ್, ಇಥಿಯೋಪಿಯಾ, ಬುರ್ಕಿನಾ ಫಾಸೊ, ಸಿರಿಯಾ ಮತ್ತು ಮ್ಯಾನ್ಮಾರ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಹಿಂಸಾಚಾರ ಹೆಚ್ಚಿದ್ದು, ಸ್ಥಳಾಂತರ ನಡೆಯುತ್ತಿದೆ ಎನ್ನಲಾಗಿದೆ. ಯೆಮೆನ್‌ನಲ್ಲಿ ಸಂಘರ್ಷ ಆರಂಭವಾಗಿ ಏಳು ವರ್ಷ ಕಳೆದಿದ್ದು, 40 ಲಕ್ಷಕ್ಕೂ ಹೆಚ್ಚು ಮಂದಿ ವಲಸೆ ಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!