ಒಂದೇ ದಿನ ರಷ್ಯಾದ ಸಾವಿರ ಯೋಧರನ್ನು ಕೊಂದುಹಾಕಿದ ಉಕ್ರೇನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತನ್ನ ಮೇಲೆ ದಾಳಿ ನಡೆಸಿರುವ ರಷ್ಯಾದ ಮೇಲೆ ಬುಧವಾರ ಉಕ್ರೇನಿಯನ್ ಪಡೆಗಳು ಭೀಕರ ಪ್ರತಿದಾಳಿ ನಡೆಸಿದ್ದು ರಷ್ಯಾದ ಸೈನಿಕರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಕನಿಷ್ಠ 1,000 ಜನರನ್ನು ಕೊಂದುಹಾಕಿದೆ. ಒಂದೇ ದಿನದಲ್ಲಿ ರಷ್ಯಾ ಅತಿದೊಡ್ಡ ಸಂಖ್ಯೆಯ ಸಾವುನೋವುಗಳನ್ನು ಅನುಭವಿಸಿದೆ. ಈ ವರೆಗಿನ ಸಂಘರ್ಷದಲ್ಲಿ ಒಟ್ಟಾರೆ 71,200 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಉಕ್ರೇನ್‌ನ ರಕ್ಷಣಾ ಸಚಿವಾಲಯವು ಎಂದು ಹೇಳಿಕೊಂಡಿದೆ.
ಫೆಬ್ರವರಿಯಲ್ಲಿ ಉಕ್ರೇನ್ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ರಷ್ಯಾ ಪಡೆಗಳು ಪ್ರಮುಖ ಯುದ್ಧಭೂಮಿ ಹಿನ್ನಡೆಗಳನ್ನು ಅನುಭವಿಸುತ್ತಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ತಿಂಗಳು ರಕ್ಷಣಾ ಪಡೆಗಳ ಮರು ಸಜ್ಜುಗೊಳಿಸುವಿಕೆಗೆ ಆದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!