ಸ್ಟಾರ್ಟ್‌ ಅಪ್‌ಗಳಲ್ಲಿ ಭಾರೀ ಉದ್ಯೋಗ ಕಡಿತ: ಓಲಾ, ಅನ್‌ ಅಕಾಡೆಮಿಯಂತಹ ಯೂನಿಕಾರ್ನ್‌ಗಳಲ್ಲಿ ಕೆಲಸ ಕಳೆದುಕೊಂಡವರೆಷ್ಟು ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022ರ ವರ್ಷವೂ ಸಹ ಜಾಗತಿಕ ಅರ್ಥ ವ್ಯವಸ್ಥೆಗೆ ಪೂರಕವಾಗಿಲ್ಲ. ಪ್ರಸ್ತುತ ಉಂಟಾಗಿರುವ ಆರ್ಥಿಕ ಹಿಂಜರಿತ ಪರಿಸ್ಥಿತಿಗಳಿಂದಾಗಿ ಷೇರು ಮಾರುಕಟ್ಟೆಯಲ್ಲಿ  ಕುಸಿತ ಕಂಡಿದೆ. ಇದರ ಪರಿಣಾಮವಾಗಿ ಅನೇಕ ಸ್ಟಾರ್ಟ್‌ಅಪ್‌ಗಳು ತಮ್ಮ ಖರ್ಚು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಪ್ರಯತ್ನಕ್ಕೆ ಕೈ ಹಾಕಿದೆ. ಈ ಪ್ರಕ್ರಿಯೆಯಲ್ಲಿ ಈಗಾಗಲೇ ಸಾವಿರಾರು ಜನ ಜೀವನೋಪಾಯವಿಲ್ಲದೆ ಬೀದಿಗೆ ಬಿದ್ದಿದ್ದಾರೆ.

ಇಲ್ಲಿಯವರೆಗೆ ಸುಮಾರು 27 ಭಾರತೀಯ ಸ್ಟಾರ್ಟ್‌ಅಪ್‌ ಕಂಪನಿಗಳು 10,029 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ, ಇದರಲ್ಲಿ ಯುನಿಕಾರ್ನ್‌ಗಳಾದ ಕಾರ್ಸ್24, ಓಲಾ, ಮೀಶೋ, ಎಂಪಿಎಲ್, ಟ್ರೆಲ್, ಅನ್‌ಅಕಾಡೆಮಿ ಮತ್ತು ವೇದಾಂತು ಸೇರಿವೆ. ಈ ಪಟ್ಟಿಯಲ್ಲಿ ಇಂಡಿಯಾಬುಲ್ಸ್‌ನ ಸಾಮಾಜಿಕ ವಾಣಿಜ್ಯ ಉದ್ಯಮ ಯಾರಿ ಕೂಡ ಇದೆ.

ಕಳೆದ ಮೇ ತಿಂಗಳೊಂದರಲ್ಲೇ, 9 ಸ್ಟಾರ್ಟಪ್‌ಗಳು ಉದ್ಯೋಗಿಗಳನ್ನು ವಜಾಗೊಳಿಸಿದ್ದು, 3,379 ಮಂದಿ ಮೇಲೆ ಪ್ರಭಾವ ಬೀರಿದೆ.  ಜೂನ್‌ನಲ್ಲಿ 10 ಸ್ಟಾರ್ಟ್‌ಅಪ್‌ಗಳು ಸಹ ಕೆಲಸಗಾರರನ್ನು ತೆಗೆದುಹಾಕಿದ್ದವು. ಮೇ ತಿಂಗಳಿನ 1,270 ಕ್ಕೆ ಹೋಲಿಸಿದರೆ ಪರಿಣಾಮ ಬೀರುವ ಉದ್ಯೋಗಿಗಳ ಸಂಖ್ಯೆಯು ಕಡಿಮೆ ಆಗಿದೆ.

ಗ್ರಾಹಕ ಸೇವೆಗಳು ಸಹ ಹೆಚ್ಚಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ನಂತರ ಈ ಸಾಲಿಗೆ ಇ-ಕಾಮರ್ಸ್ ಮತ್ತು ಎಡ್‌ಟೆಕ್‌ ಸೇರಿಕೊಂಡಿವೆ. ಮೂರು ವಲಯಗಳಲ್ಲಿ ಒಟ್ಟಾರೆಯಾಗಿ 18 ಸ್ಟಾರ್ಟಪ್‌ಗಳು ಇದುವರೆಗೆ 8,659 ಉದ್ಯೋಗಿಗಳನ್ನು ವಜಾಗೊಳಿಸಿವೆ. ವಜಾಗೊಳಿಸಿದ ಪ್ರತಿ 10 ಉದ್ಯೋಗಿಗಳಲ್ಲಿ ಸುಮಾರು 9 ಜನ ಗ್ರಾಹಕ ಸೇವೆಗಳು, ಇಕಾಮರ್ಸ್ ಅಥವಾ ಎಡ್‌ಟೆಕ್‌ (edtech) ನಲ್ಲಿ ಕೆಲಸ ಮಾಡುತ್ತಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!