ಅಮೆರಿಕದ ಟೆಕ್ಸಾಸ್‌ ನಲ್ಲಿ ಭೀಕರ ದುರಂತ; ಟ್ರ್ಯಾಕ್ಟರ್‌ ಟ್ರಾಲಿಯಲ್ಲಿ 46 ಅಕ್ರಮ ವಲಸಿಗರ ಶವ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ನೆರೆರಾಷ್ಟ್ರ ಮೆಕ್ಸಿಕೋದಿಂದ ಕದ್ದು ಅಮೆರಿಕಾ ಗಡಿ ದಾಟಿ ನುಸುಳುತ್ತಿದ್ದ ಕನಿಷ್ಠ 46 ಅಕ್ರಮ ವಲಸಿಗರ ಶವಗಳು ಸೋಮವಾರ ಸ್ಯಾನ್ ಆಂಟೋನಿಯೊದ ಹೊರವಲಯದಲ್ಲಿ ನಿಂತಿದ್ದ ಟ್ರಾಕ್ಟರ್- ಟ್ರೇಲರ್‌ನೊಳಕ್ಕೆ ಪತ್ತೆಯಾಗಿವೆ.
ಈ ಅವಘಡಕ್ಕೆ ನಿಖರ ಕಾರಣವೇನು ಪತ್ತೆಯಾಗಿಲ್ಲ. ದುರಂತದಲ್ಲಿ ಬದುಕುಳಿದ ಮಕ್ಕಳು ಸೇರಿದಂತೆ ಕನಿಷ್ಠ 16 ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದರೆ ಇವರೆಲ್ಲರೂ ಶಾಖದಿಂದ ಅತಿಯಾದ ಬಳಲಿಕೆ ಮತ್ತು ನಿರ್ಜಲೀಕರಣದಿಂದ ಒದ್ದಾಡುತ್ತಿದ್ದಾರೆ ಅಧಿಕಾರಿಗಳು ಹೇಳಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ವಲಸೆಗಾರರ ​​ಸಾವಿನ ಕೆಟ್ಟ ಸಾವಿನ ಪ್ರಕರಣಗಳಲ್ಲಿ ಇದು ಒಂದಾಗಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಟೆಕ್ಸಾಸ್‌ ನಗರವು ಈ ವರ್ಷ ದಾಖಲೆಯ ಶಾಖದ ಅಲೆಯ ತಾಪಮಾನ ಮತ್ತು ಬರವನ್ನು ಎದುರಿಸುತ್ತಿದೆ. ನಗರದ ತಾಪಮಾನವು ಸೋಮವಾರ 100 ಡಿಗ್ರಿಗಳನ್ನು ತಲುಪಿತ್ತು ಎಂಬ ಮಾಹಿತಿಯಿದೆ.
ಸಾನ್ಇ‌ ಅಂಟಾನಿಯೋ ಯುಎಸ್-‌ ಮೆಕ್ಸಿಕೋ ಗಡಿಯಿಂದ 250 ಕಿಮೀ ದೂರದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಗಡಿಯಲ್ಲಿ ಸಂಭವಿಸಿದ ಮಾರಣಾಂತಿಕ ದುರಂತವಾಗಿದೆ. 2017 ರಲ್ಲಿ ಸ್ಯಾನ್ ಆಂಟೋನಿಯೊದಲ್ಲಿನ ವಾಲ್‌ಮಾರ್ಟ್‌ನಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ನೊಳಗೆ ಸಿಲುಕಿ ಹತ್ತು ವಲಸಿಗರು ಸಾವನ್ನಪ್ಪಿದ್ದರು. 2003 ರಲ್ಲಿ, 19 ವಲಸಿಗರು ಸಾವನ್ನಪ್ಪಿದ ಸ್ಥಿತಿಯಲ್ಲಿ ಸ್ಯಾನ್ ಆಂಟೋನಿಯೊದ ಆಗ್ನೇಯ ಭಾಗದಲ್ಲಿ ಟ್ರಕ್‌ ನೊಳಕ್ಕೆ ಪತ್ತೆಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!