ಏಪ್ರಿಲ್ 30ರಂದು 100ನೇ ಆವೃತ್ತಿ ಪೂರ್ಣಗೊಳಿಸಲಿರುವ ಪ್ರಧಾನಮಂತ್ರಿಯವರ ʼಮನ್ ಕಿ ಬಾತ್ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಏಪ್ರಿಲ್‌ 30ರಂದು ತನ್ನ 100ನೇ ಆವೃತ್ತಿಯನ್ನು ಪೂರ್ಣಗೊಳಿಸಲಿದೆ. ಅಕ್ಟೋಬರ್ 3, 2014 ರಂದು ವಿಜಯದಶಮಿಯ ಶುಭ ಸಂದರ್ಭದಲ್ಲಿ ಪ್ರಾರಂಭವಾದ ಕಾರ್ಯಕ್ರಮವು ಇಲ್ಲಿಯವರೆಗೆ ತನ್ನ 98 ಆವೃತ್ತಿಗಳನ್ನು ಪ್ರಸಾರ ಮಾಡಿದೆ. ಶತಮಾನೋತ್ಸವದ ಸಂಚಿಕೆಗೆ ಪೂರ್ವಭಾವಿಯಾಗಿ, ಈ ಕಾರ್ಯಕ್ರಮದ ಪರಿಣಾಮದಿಂದ ಭಾರತದಲ್ಲಿನ ಬದಲಾವಣೆಯನ್ನು ತಿಳಿಸಲು ಆಕಾಶವಾಣಿಯು ಬುಧವಾರದಿಂದ ವಿಶೇಷ ಅಭಿಯಾನವನ್ನು ಪ್ರಾರಂಭಿಸುತ್ತಿದೆ.

ಆಲ್‌ ಇಂಡಿಯಾ ರೇಡಿಯೋ (AIR) ಹೊಂದಿರುವ ಎಲ್ಲಾ ನೆಟ್‌ವರ್ಕ್‌ನಾದ್ಯಂತ ಪ್ರಧಾನಿ ಮಂತ್ರಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ, ಮೋದಿಯವರು ಹೈಲೈಟ್ ಮಾಡಿದ ನೂರು ಗುರುತಿಸಲಾದ ವಿಷಯಗಳನ್ನು ಈ ಸರಣಿಯು ಹೊರತರಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ಮನ್ ಕಿ ಬಾತ್‌ನ ಪ್ರತಿ ಸಂಚಿಕೆಯಿಂದ ಪ್ರಧಾನ ಮಂತ್ರಿಯ ಸಂಬಂಧಿತ ಧ್ವನಿ ತುಣುಕನ್ನು ಬುಲೆಟಿನ್‌ ಇತರ ಕಾರ್ಯಕ್ರಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಈ ಅಭಿಯಾನವು ಮಾರ್ಚ್‌ 15ರಿಂದ ಪ್ರಾರಂಭಗೊಂಡು ಏಪ್ರಿಲ್‌ 29ರಂದು 100ನೇ ಸಂಚಿಕೆ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ಮುಕ್ತಾಯಗೊಳ್ಳಲಿದೆ.

ಈ ಅಭಿಯಾನವು ಇಲ್ಲಿಯವರೆಗಿನ ‘ಮನ್ ಕಿ ಬಾತ್’ ಸಂಚಿಕೆಗಳಲ್ಲಿ ಪ್ರಧಾನಿ ಮೋದಿಯವರು ಹೈಲೈಟ್ ಮಾಡಿದ 100 ಗುರುತಿಸಲಾದ ವಿಷಯ ವಸ್ತುಗಳನ್ನು ಹೊರತರಲಿದೆ.

ದೇಶದ 42 ವಿವಿಧ್ ಭಾರತಿ ಕೇಂದ್ರಗಳು, 25 ಎಫ್‌.ಎಂ. ರೈನ್‌ ಬೋ ಚಾನೆಲ್‌ಗಳು, ನಾಲ್ಕು ಎಫ್‌.ಎಂ. ಗೋಲ್ಡ್ ಚಾನೆಲ್‌ಗಳು ಮತ್ತು 159 ಪ್ರಾಥಮಿಕ ಚಾನೆಲ್‌ಗಳು ಸೇರಿದಂತೆ ವಿವಿಧ ಆಲ್‌ ಇಂಡಿಯಾ ರೇಡಿಯೋ ಕೇಂದ್ರಗಳು ಈ ಅಭಿಯಾನವನ್ನು ನಡೆಸುತ್ತವೆ.

ಈ ಕಾರ್ಯಕ್ರಮವು ಖಾದಿ, ಭಾರತೀಯ ಆಟಿಕೆ ಉದ್ಯಮ, ಆರೋಗ್ಯ, ಆಯುಷ್ ಮತ್ತು ಬಾಹ್ಯಾಕಾಶದಲ್ಲಿ ಸ್ಟಾರ್ಟ್‌ಅಪ್‌ಗಳಂತಹ ಕೈಗಾರಿಕೆಗಳ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರಿದೆ.

ನಾಗರಿಕರು ‘ನ್ಯೂಸ್ ಆನ್ ಏರ್’ ಆಪ್ ಮತ್ತು ಆಲ್ ಇಂಡಿಯಾ ರೇಡಿಯೊದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಾರ್ಯಕ್ರಮವನ್ನು ಆಲಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!