Saturday, April 1, 2023

Latest Posts

ನಾಳೆಯಿಂದ ಕೆಪಿಟಿಸಿಎಲ್ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ, ಅಗತ್ಯ ಸೇವೆಗಳಿಗೆ ಮಾತ್ರ ವಿದ್ಯುತ್ ಪೂರೈಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘವು ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದೆ.

ಆಸ್ಪತ್ರೆಗಳು, ತುರ್ತು ಸೇವೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು, ವಿದ್ಯುತ್ ಕೇಬಲ್ ಕಟ್ ಆಗಿರುವಂಥ ದೂರುಗಳಿಗೆ ಸ್ಪಂದನೆ ನೀಡುತ್ತೇವೆ ಎಂದು ಒಕ್ಕೂಟದ ಕಾರ್ಯದರ್ಶಿ ಕೆ. ಬಲರಾಮ್ ಮಾಹಿತಿ ನೀಡಿದ್ದಾರೆ.

ಸರ್ಕಾರ ವೇತನ ಹೆಚ್ಚಿಸಬೇಕು, ಖಾಲಿ ಇರುವ 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು, ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿ ಒಂದು ವರ್ಷ ಆಗಿದೆ, ಆದರೂ ಯಾವುದೇ ಉತ್ತರ ಇಲ್ಲ, 40%ರಷ್ಟು ಹೆಚ್ಚಳ ಕೋರಿದ್ದೇವೆ, ಸರಣಿ ಸಭೆ ಮಾತುಕತೆ ನಂತರ ಶೇ.22ರಷ್ಟು ಹೆಚ್ಚಳಕ್ಕೆ ಒಪ್ಪಿದ್ದೇವೆ ಎಂದು ಒಕ್ಕೂಟ ಹೇಳಿದೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಕೆಲಸದ ಹೊರೆ ಹೆಚ್ಚಾಗಿದೆ ಇದನ್ನು ನಿಭಾಯಿಸುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!