Sunday, June 26, 2022

Latest Posts

ಏಕಕಾಲಕ್ಕೆ 10 ಸಾವಿರ ಜನರು ಯೋಗದಲ್ಲಿ ಭಾಗಿ

ಚಿಕ್ಕೋಡಿ ಹೊಸದಿಗಂತ ವರದಿ:

ನಿಪ್ಪಾಣಿಯ ಶಿರಪೇವಾಡಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಸಿಬಿಎಸ್‌ಸಿ ಶಾಲೆಯ ಮೈದಾನದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸುಮಾರು ೧೦ ಸಾವಿರ ಜನರು ಯೋಗಾಭ್ಯಾಸ ನಡೆಸಿದರು‌. ಈ ವೇಳೆ ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಮುಖ ಆಚಾರ ಭವರಲಾಲ ಆರ್ಯ ಅವರು ಮಾತನಾಡಿ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಕಾಣಬೇಕಾದರೆ ಪ್ರತಿನಿತ್ಯ ಯೋಗವನ್ನು ಮಾಡಬೇಕು. ಇವತ್ತು ನಿಪ್ಪಾಣಿಯಲ್ಲಿ ಜೊಲ್ಲೆ ದಂಪತಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯೋಗ ದಿನಾಚರಣೆ ಯನ್ನು ಆಚರಿಸಿರುವ ಅವರ ಕಾರ್ಯ ಶ್ಲಾಘನೀಯ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ರೋಗದಿಂದ ಮುಕ್ತರಾಗಲು ಭಾರತೀಯ ಯೋಗಪದ್ದತೆ ಯಾವದೇ ಖರ್ಚು ಇಲ್ಲದೆ ಸಹಕಾರಿಯಾಗಿದೆ. ಇಂದು ಜಗತ್ತು ಭಾರತಯೋಗಕ್ಕೆ ತಲೆಬಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss