-ಪ್ರದೀಪ ನಾಗನೂರ
ಜಲಯೋಗಿಯಾಗಿರುವ ಅಶೋಕ ಮಲ್ಲಪ್ಪ ಶಿಗ್ಗಾಂವಿ ಅವರು ನೀರಿನಲ್ಲಿ ಸಲೀಸಾಗಿ ವಿವಿಧ ಭಂಗಿಯ ಸುಮಾರು 50ಕ್ಕೂ ಹೆಚ್ಚು ಆಸನ ಮಾಡುವ ರೂಢಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಹುಟ್ಟು ವಿಕಲಚೇತನರಾಗಿದ್ದರೂ ಕೂಡ ಚಿಕ್ಕಂದಿನಿಂದನಲೇ ತಂದೆಯ ಸಹಾಯದೊಂದಿಗೆ ಯೋಗಾಸನದ ರೂಢಿ ಬೆಳೆಸಿಕೊಂಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅಶೋಕ ಅವರ ತಂದೆ ಊರಿನ ಕೆರೆಯಲ್ಲಿ ಮಗನಿಗೆ ಯೋಗಾಭ್ಯಾಸ ಮಾಡಿದ್ದಾರೆ. ನೀರಿನ ಮೇಲೆ ತಂದೆ ಮಾಡುತ್ತಿದ್ದ ವಿವಿಧ ಆಸನಗಳ ಭಂಗಿಗಳನ್ನು ನೋಡಿ ಈ ಕಲೆ ರೂಢಿಸಿಕೊಂಡೆ ಎನ್ನುತ್ತಾರೆ ಅಶೋಕ.
ನೀರಿನಲ್ಲಿ ವಿಶಿಷ್ಟ ಸಾಧನೆ ಯೋಗಾಸನ ಮಾಡುವ ಇವರು ನೀರಿನಲ್ಲಿ ಉಸಿರು ಬಿಗಿ ಹಿಡಿದು ಮುಳುಗಿ ಏಳುವರು. ನಂತರ ಬಹಳಷ್ಟು ಗಂಟೆ ಮುಳುಗದೇ ಇರುವರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಬಳಿ ಇರುವ ಮಲಪ್ರಭಾ ನದಿ ಇವರ ಸಾಧನಾ ಸ್ಥಳ. ಪದೇ ಪದೇ ಹೋಗುವ ಇವರು ಅಲ್ಲಿ ೩ಕೀ.ಮಿಗಿಂತ ಹೆಚ್ಚು ಈಜಿ ಸಾಧನೆ ಮಾಡಿದ್ದಾರೆ. ತಂದೆಯಿಂದ ಬಳುವಳಿಯಾಗಿ ಬಂದ ಈ ವಿಶಿಷ್ಠ ಸಾಧನೆಯನ್ನು ಇನ್ನೊಬ್ಬರಿಗೆ ಕಲಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ.