ಬಾಹರ್ ಜುಗಾರಿ ಆಡುತ್ತಿದ್ದ 11 ಮಂದಿ ಬಂಧನ

ಹೊಸದಿಗಂತ ವರದಿ, ಅಂಕೋಲಾ:

ಕಾನೂನು ಬಾಹಿರವಾಗಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ ಪ್ರದೇಶಕ್ಕೆ ಅಂಕೋಲಾ ಪೊಲೀಸರು ದಾಳಿ ನಡೆಸಿ 11 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಗುಂಡಬಾಳ ಗ್ರಾಮದ ನೆವಳಸೆಯ ಬೀದಿ ಬೀರ ದೇವಸ್ಥಾನದ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಹಣ ಕಟ್ಟಿ ಅಂದರ್ ಬಾಹರ್ ಜುಗಾರಿ ಆಟದಲ್ಲಿ ತೊಡಗಿದ್ದಾಗ ರಾತ್ರಿ 2.45ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಹಿಲ್ಲೂರ ಬೈಲ್ ನಿವಾಸಿ ನಾಗರಾಜ ತಿಪ್ಪಾ ಗೌಡ (26) ನೆವಳಸೆ ನಿವಾಸಿ ಮಂಜುನಾಥ ನಾಗು ಗೌಡ (45) ಅಗಸೂರು ನಿವಾಸಿ ಚಂದ್ರಹಾಸ ಗಣಪತಿ ಗೌಡ (43) ಗುಂಡಬಾಳ ನಿವಾಸಿ ಗಂಗಾಧರ ವೆಂಕಟ್ರಮಣ ಗೌಡ (42) ಬೋಳೆ ಹೊಸಗದ್ದೆ ನಿವಾಸಿ ಸತೀಶ ಶಂಕರ ಗೌಡ (30)
ಸರಳೇಬೈಲ್ ನಿವಾಸಿ ಪಾಂಡುರಂಗ ಗೌಡ (44) ಹಿಲ್ಲೂರು ಮೂಲೆಗದ್ದೆ ನಿವಾಸಿ ಮಾಣೇಶ್ವರ ಹಮ್ಮಣ್ಣ ನಾಯಕ (70) ಹನೇಹಳ್ಳಿ ಗೋಕರ್ಣ ನಿವಾಸಿ ನರೇಶ ಪ್ರಮೋದ ನಾಯಕ (30) ಹೊಸಗದ್ದೆ ನಿವಾಸಿ ವಿಘ್ನೇಶ್ ಸುಕ್ರು ಗೌಡ (34) ನೆವಳಸೆ ನಿವಾಸಿ ಅಶೋಕ ಶಂಕರ ಗೌಡ (28) ಹೀರೆಗುತ್ತಿ ಎಣ್ಣೆಮಡ್ಡಿ ನಿವಾಸಿ ಮಂಜುನಾಥ ನಾರಾಯಣ ನಾಯಕ ಬಂಧಿತ ಆರೋಪಿಗಳಾಗಿದ್ದು ಜುಗಾರಿ ಆಟದಲ್ಲಿ ತೊಡಗಿಸಿದ್ದ 25430 ರೂಪಾಯಿ ನಗದು ಹಣವನ್ನು ಮತ್ತು ಜುಗಾರಾಟದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಿ.ಎಸ್.ಐ ಪ್ರವಿಣಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!