ನಾಡಿನೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ: ಸಿಎಂ ಬೊಮ್ಮಾಯಿ ಶುಭಾಶಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಜನತೆಗೆ ಶುಭ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ನಾಡಿನ ಸಂಕಷ್ಟಗಳೆಲ್ಲವನ್ನೂ ಪರಿಹರಿಸಿ, ಆ ಮಹಾಮಹೀಶ್ವರ ಸಕಲ ಜೀವರಾಶಿಗಳಿಗೂ ಒಳಿತು ಮಾಡಲಿ ಎಂದು ಹೇಳಿದ್ದಾರೆ.

ಶಿವರಾತ್ರಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಕ್ಷೀರಾಭಿಷೇಕ ಹಾಗೂ ವಿಶೇಶ ಪೂಜೆಗಳು ನಡೆಯುತ್ತಿದೆ. ಭಕ್ತರು ದೇವಾಲಯಗಳಲ್ಲಿ ದಂಡು ದಂಡಾಗಿ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!