ಬ್ರೆಜಿಲ್‌ನಲ್ಲಿ ಭೂಕುಸಿತ, ಪ್ರವಾಹ: 117 ಮಂದಿ ಸಾವು, 700 ಮಂದಿಗೆ ತಾತ್ಕಾಲಿಕ ವಸತಿ ಶಿಬಿರದಲ್ಲಿ ಆಶ್ರಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಅಮೆರಿಕ ಖಂಡದಲ್ಲಿರುವ ದೇಶ ಬ್ರೆಜಿಲ್ ಮಹಾಮಳೆಯಿಂದ ತತ್ತರಿಸಿದೆ. ಮಳೆಯಿಂದಾಗಿ ಭೂಕುಸಿತ ಉಂಟಾಗಿ 117 ಮಂದಿ ಮೃತಪಟ್ಟಿದ್ದಾರೆ. ಪೆಟ್ರೋಪೊಲೀಸ್ ನಗರ ವರುಣಾರ್ಭಟಕ್ಕೆ ತತ್ತರಿಸಿದ್ದು, ಅಂದಾಜಿಸಲಾಗದಷ್ಟು ಹಾನಿ ಸಂಭವಿಸಿದೆ. ರಿಯೊ ಡಿ ಜನೈರೊ ನಗರದ ಉತ್ತರಕ್ಕಿರುವ ಪೆಟ್ರೋಪೊಲಿಸ್‌ನಲ್ಲಿ ಕನಿಷ್ಠ 60 ಮನೆಗಳು ನಾಶಗೊಂಡಿವೆ.

ಮನೆಗಳು ನಾಶಗೊಂಡಿದ್ದು, ಇಲ್ಲಿ ಸಾಕಷ್ಟು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ನಾಗರಿಕ ರಕ್ಷಣಾ ಸೇವೆಯ ಸಿಬ್ಬಂದಿ ಜನರನ್ನು ರಕ್ಷಿಸುವ ಕಾರ್ಯ ಜಾರಿಯಲ್ಲಿದೆ. ನಿನ್ನೆ ಮಧ್ಯಾಹ್ನ ಮಳೆ ಅಬ್ಬರ ತೀವ್ರಗೊಂಡಿದ್ದು, ಪೆಟ್ರೊಪೊಲಿಸ್ ನಗರವೊಂದರಲ್ಲೇ ಆರು ಸೆಂಟಿಮೀರ್ ಮಳೆ ಸುರಿದಿದೆ.

ಸುಮಾರು 700 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಸ್ಥಳೀಯ ಶಾಳೆಗಳು ಮತ್ತು ಸರ್ಕಾರ ಸ್ಥಾಪಿಸಿರುವ ತಾತ್ಕಾಲಿಕ ವಸತಿ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!