ನೆದರ್‌ಲ್ಯಾಂಡ್ಸ್‌ನಲ್ಲಿ ಭಾರೀ ಬಿರುಗಾಳಿ: ಸುಮಾರು 167 ವಿಮಾನಗಳ ಹಾರಾಟ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೆದರ್‌ಲ್ಯಾಂಡ್ಸ್‌ನಲ್ಲಿ ಬಿರುಗಾಳಿ ಕಾರಣದಿಂದಾಗಿ ಸುಮಾರು 167 ವಿಮಾನಗಳ ಹಾರಾಟ ಮೊಟಕುಗೊಳಿಸಲಾಗಿದೆ.
ಬಿರುಗಾಳಿಯಿಂದಾಗಿ ವಾತಾವರಣ ಹದಗೆಟ್ಟಿದ್ದು, ನೆದರ್‌ಲ್ಯಾಂಡ್ಸ್‌ಗೆ ಬರುವ ಮತ್ತು ನೆದರ್‌ಲ್ಯಾಂಡ್ಸ್‌ನಿಂದ ತೆರಳುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಗಂಟೆಗೆ 139 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ದೇಶದ ಹಲವು ಭಾಗಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ನೆದರ್‌ಲ್ಯಾಂಡ್ಸ್‌ನ ಹವಾಮಾನ ಇಲಾಖೆ ಯೂನೈಸ್ ಚಂಡಮಾರುತದ ಎಚ್ಚರಿಕೆ ನೀಡಿದ್ದು, ಶುಕ್ರವಾರ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!