ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಒಳಗಾಗಿರುವ ಜಾರ್ಖಂಡ್‌ನಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 12.71 ರಷ್ಟು ಮತದಾನವಾಗಿದೆ.
ಪಾಕುರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡಾ 16.12 ರಷ್ಟು ಮತದಾನವಾಗಿದೆ ಮತ್ತು ಬೊಕಾರೋದಲ್ಲಿ ಕನಿಷ್ಠ ಶೇಕಡಾ 12.48 ರಷ್ಟು ಮತದಾನವಾಗಿದೆ.
ಇಸಿಐ ಪ್ರಕಾರ, ದಿಯೋಘರ್ ಶೇ.14.24, ಧನ್ಬಾದ್ ಶೇ.12.76, ದುಮ್ಕಾ ಶೇ.14.48, ಗಿರಿದಿಹ್ ಶೇ.12.69, ಹಜಾರಿಬಾಗ್ ಶೇ.14.02, ಜಮ್ತಾರಾ ಶೇ.14.90 ಮತ್ತು ರಾಂಚಿ ಶೇ.15.81 ಅಷ್ಟು ಮತದಾನ ದಾಖಲಾಗಿದೆ.