ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಇಂದು ಬೆಳಗ್ಗೆ ಆರಂಭವಾದ ವಿಧಾನಸಭೆ ಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.6.61ರಷ್ಟು ಮತದಾನವಾಗಿದೆ.
ಭಾರತದ ಚುನಾವಣಾ ಆಯೋಗದ ಪ್ರಕಾರ. ಮಹಾರಾಷ್ಟ್ರದ ಮತಗಟ್ಟೆಯ ಅಂಕಿಅಂಶಗಳ ಪ್ರಕಾರ, ನಕ್ಸಲ್ ಪೀಡಿತ ಜಿಲ್ಲೆ ಗಡ್ಚಿರೋಲಿಯಲ್ಲಿ ಅತಿ ಹೆಚ್ಚು ಶೇಕಡಾ 12.33 ರಷ್ಟು ಮತದಾನವಾಗಿದೆ, ಆದರೆ ಒಸ್ಮಾನಾಬಾದ್ ಜಿಲ್ಲೆಯಲ್ಲಿ ಬೆಳಿಗ್ಗೆ 9 ರವರೆಗೆ ಶೇಕಡಾ 4.85 ರಷ್ಟು ಮತದಾನವಾಗಿದೆ.
ಮುಂಬೈ ನಗರದಲ್ಲಿ ಶೇ 6.25, ಮುಂಬೈ ಉಪನಗರದಲ್ಲಿ ಶೇ 7.88, ನಾಗ್ಪುರದಲ್ಲಿ ಶೇ 6.86, ಥಾಣೆಯಲ್ಲಿ ಶೇ 6.66, ಔರಂಗಾಬಾದ್‌ನಲ್ಲಿ ಶೇ 7.05, ಪುಣೆಯಲ್ಲಿ ಶೇ 5.53, ನಾಸಿಕ್‌ನಲ್ಲಿ ಶೇ 6.89, ಜಲಗಾಂವ್‌ನಲ್ಲಿ ಶೇ 5.85.14 ಮತದಾನವಾಗಿದೆ. ಕೊಲ್ಲಾಪುರ ಶೇ.7.38, ಧುಲೆ ಶೇ.6.79, ಪಾಲ್ಘರ್ ಶೇ.7.30, ನಾಂದೇಡ್ ಶೇ.5.42, ರತ್ನಗಿರಿ ಶೇ.9.30 ಮತ್ತು ಲಾತೂರ್ ನಲ್ಲಿ ಶೇ.5.91 ಅಷ್ಟು ಮತದಾನ ದಾಖಲಾಗಿದೆ.