Tuesday, March 28, 2023

Latest Posts

2ನೇ ಬ್ಯಾಚ್‌ನ 12ಚೀತಾಗಳು ಭಾರತಕ್ಕೆ: ಈ ತಿಂಗಳ 18ಕ್ಕೆ ಕುನೊ ಪಾರ್ಕ್‌ಗೆ ಎಂಟ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳು ಭಾರತಕ್ಕೆ ಬರಲಿವೆ. ಇದೇ ತಿಂಗಳ 18 ರಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟ್ರಿ ಕೊಡಲಿವೆ ಎಂದು ಅರಣ್ಯ ಇಲಾಖೆಯ ಹೇಳಿದೆ. ದಕ್ಷಿಣ ಆಫ್ರಿಕಾ ಜತೆಗಿನ ಒಪ್ಪಂದದ ಭಾಗವಾಗಿ 12 ಚೀತಾಗಳು ಭಾರತಕ್ಕೆ  ಬರಲಿವೆ.

ಈ ಚೀತಾಗಳು ದಕ್ಷಿಣ ವಾಯು ಮಾರ್ಗದ ಮೂಲಕ ಭಾರತಕ್ಕೆ ಬರಲಿವೆ. ಅವುಗಳಲ್ಲಿ ಹೆಣ್ಣು ಮತ್ತು ಗಂಡು ಚೀತಾಗಳಿರಲಿವೆ. ಗಂಡು-ಹೆಣ್ಣು ಸಂಖ್ಯೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ನಿಯಮಗಳ ಪ್ರಕಾರ, ಒಂದು ತಿಂಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ. ಅದರ ನಂತರ ಅವುಗಳನ್ನು ಕುನೋ ಪಾರ್ಕ್‌ಗೆ ಬಿಡುಗಡೆ ಮಾಡಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!